ಅರವಣ ಪ್ರಸಾದದಲ್ಲಿ ಹಲಾಲ್ ಪ್ರಮಾಣ ಪತ್ರ ,ಅರಬೀ ಹೆಸರು?
ತಿರುವನಂತಪುರ : ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆ ದರ್ಶನಕ್ಕೆ ಈಗಾಗಲೇ ದೇಗುಲದ ಬಾಗಿಲು ತೆರೆಯಲಾಗಿದೆ.ಕೊರೊನಾ ಹಾವಳಿಯಿಂದ ಕಳೆದ ವರ್ಷ ಶಬರಿಮಲೆಗೆ ಯಾತ್ರೆ ಮಾಡಿದವರ ಸಂಖ್ಯೆ ತೀರಾ ಕಡಿಮೆ.
ಈ ಬಾರಿ ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧರಣೆ ಆರಂಭಗೊಂಡಿದೆ.ಈತನ್ಮದ್ಯೆ ದೇವಸ್ಥಾನದ ‘ಆರಾವಣಾ ಪಾಯಿಸಮ್’ ಪ್ರಸಾದದಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಸಾದಕ್ಕೆ ‘ಅಲ ಝಹಾ’ ಎಂಬ ಅರೇಬಿ ಹೆಸರು ನೀಡಿದೆ ಹಾಗೂ ಅದರ ಮೇಲೆ `ಹಲಾಲ್ ಪ್ರಮಾಣೀಕೃತ’ ಎಂದು ಉಲ್ಲೇಖಿಸಲಾಗಿದೆ. ಮೇಲ್ನೋಟಕ್ಕೆ ಇದು ಶಬರಿಮಲೆಯ ಪ್ರಸಾದದಂತೆ ಕಾಣುತ್ತಿಲ್ಲ.ಖಾಸಗಿಯಾಗಿ ಮಾಡಿರುವ ಸಿಹಿ ಪದಾರ್ಥ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಇದೇ ಶಬರಿಮಲೆಯ ಪ್ರಸಾದ ಎಂದು ಬಿಂಬಿಸಲಾಗಿದ್ದು,ಇದು ಸತ್ಯಕ್ಕೆ ದೂರವಾದ ವಿಚಾರ ಎನ್ನಲಾಗಿದೆ.
ಆದರೆ ಈ ಕುರಿತು ತಿರುವಾಂಕೂರು ದೇವಸ್ವಂ ಬೋರ್ಡ್ ಸ್ಪಷ್ಟನೆ ನೀಡಬೇಕಿದೆ.
Fake news circulating