ಪುತ್ತೂರು: ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ, ಮಾನಸಿಕ ಖಿನ್ನತೆಯಿಂದ ಊಟ ನಿದ್ದೆ ಬಿಟ್ಟು ವ್ಯಕ್ತಿ ಸಾವು!!

Share the Article

ಇತ್ತೀಚೆಗೆ ಪೋಕ್ಸೋ ಕಾಯಿದೆಯಡಿ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯೊಬ್ಬರು, ತಾನು ಮಾಡದ ತಪ್ಪಿಗೆ ಸುಖಾಸುಮ್ಮನೆ ಸೆರೆವಾಸ ಅನುಭವಿಸಿದಲ್ಲದೇ, ಸಭ್ಯನಾಗಿದ್ದ ತನ್ನ ಮರ್ಯಾದಿ ಹೋಯಿತಲ್ಲ ಎಂದು ಊಟ, ನಿದ್ದೆ ಬಿಟ್ಟು ಮಾನಸಿಕ ಖಿನ್ನತೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ತಾಲೂಕಿನ ಬಡಗನ್ನೂರು ನಿವಾಸಿ ಆದಂ ಕುಂಞ ಎಂದು ಗುರುತಿಸಲಾಗಿದೆ.

ಮೃತರು ಬಡಗನ್ನೂರಿನಲ್ಲಿ ಬೀಡಿ ಬ್ರಾಂಚ್ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ಅದೇ ಗ್ರಾಮದ ದಲಿತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೋಕ್ಸೋ ಪ್ರಕರಣದಡಿ ಪೊಲೀಸರಿಂದ ಬಂಧನಕ್ಕೊಳಗಾಗಿ 12 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು ಆ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.

ತಾನು ತಪ್ಪು ಮಾಡಿಲ್ಲವಾದರೂ ಸುಖಾಸುಮ್ಮನೆ ಆರೋಪ ಹೊರಿಸಿ ಬಂಧನಮಾಡಿದ್ದಲ್ಲದೇ, ಸಭ್ಯನಾಗಿದ್ದ ನನ್ನ ಮರ್ಯಾದಿ ಹಾಳು ಮಾಡಿದ್ದಾರೆ ಎಂದು ನೊಂದುಕೊಂಡಿದ್ದ ಆದಂ ಊಟ ನಿದ್ದೆ ಬಿಟ್ಟು ಮಾನಸಿಕ ಖಿನ್ನತೆಗೊಳಗಾಗಿ ತೀರಾ ಅಸ್ವಸ್ಥರಾಗಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಮೃತರು ಮುಂಡೋಳ ಮಸೀದಿಯ ಜಮಾಲತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದರು.

Leave A Reply

Your email address will not be published.