ಖಾಸಗಿ ಶಾಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ | 2020-21 ನೇ ಸಾಲಿನ ಖಾಸಗಿ ಶಾಲಾ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಬೆಂಗಳೂರು : ಖಾಸಗಿ ಶಾಲೆ ಮಕ್ಕಳ ಶುಲ್ಕ ಪಾವತಿಸಿದ್ದ ಪೋಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್ ಮಾಡುವಂತೆ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ನೀಡಿದೆ.
2020-21 ನೇ ಸಾಲಿನ ಶೇಕಡಾ 30 ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು. ಸದ್ಯ ಹೈಕೋರ್ಟ್ ಈ ಬಗ್ಗೆ ತೀರ್ಪು ನೀಡಿದ್ದು, ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆಯುವಂತೆ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ ಶುಲ್ಕ ಪಡೆಯಲು ಸರ್ಕಾರದಿಂದ ಅಧಿಕೃತವಾಗಿ 2020-21 ನೇ ಸಾಲಿನ ಶುಲ್ಕ ಆದೇಶವನ್ನು ಪ್ರಕಟಿಸಲಾಗಿದ್ದು, ಹೆಚ್ಚುವರಿ ಶುಲ್ಕವನ್ನು ಖಾಸಗಿ ಶಾಲೆಗಳು ವಾಪಸ್ ನೀಡಬೇಕಿದೆ ಎಂದು ಹೇಳಲಾಗಿದೆ.