ಮಸೀದಿ ಆಡಳಿತ ವಿವಾದ ಶಂಕೆ ,ಎಸ್.ಡಿ.ಪಿ.ಐ ಕಾರ್ಯಕರ್ತನಿಗೆ ತಂಡದಿಂದ ಹಲ್ಲೆ

Share the Article

ಮಂಗಳೂರು : ಎಸ್ ಡಿಪಿಐ ಕಾರ್ಯಕರ್ತನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಕಾರು ಗ್ರಾಮದ ಹಿದಾಯತ್ ನಗರದಲ್ಲಿ ನಡೆದಿದೆ.

ಇಕ್ಬಾಲ್ (35) ಗಾಯಾಳು. ಮುಳ್ಳುಗುಡ್ಡೆ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮನೆ ಶ್ರಮದಾನದಲ್ಲಿ ಪಾಲ್ಗೊಳ್ಳಲು ಸ್ಕೂಟರಿನಲ್ಲಿ ತೆರಳುವ ಸಂದರ್ಭ ಘಟನೆ ನಡೆದಿದೆ.

ಹಿದಾಯತ್ ನಗರ ಎಂಬಲ್ಲಿ ತಂಡ ಅಡ್ಡಗಟ್ಟಿ ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂದು ದೂರಲಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಖಂಡಿಸಿರುವ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ , ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ. ಮಸೀದಿ ಆಡಳಿತ ವಿವಾದಕ್ಕೆ ಸಂಬಂಧಿಸಿ ಹಲ್ಲೆ ನಡೆದಿರುವ ಶಂಕೆಯಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply