1 ಲಕ್ಷ ವ್ಯಯಿಸಿ ನಾಲ್ಕು ತಿಂಗಳಲ್ಲಿ 8 ಲಕ್ಷ ಗಳಿಸುವ ಈ ಬೆಳೆಯ ಬಗ್ಗೆ ನಿಮಗೆ ಮಾಹಿತಿ ಇದೆಯೇ?? | ಸರ್ಕಾರದ ಸಬ್ಸಿಡಿಯೂ ಸಿಗುವ ಈ ಬೆಳೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ
ಕೃಷಿಕ ಅಂದ ಮೇಲೆ ಆತ ಕಡಿಮೆ ಖರ್ಚಿನಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಎಂದು ಯೋಚಿಸುತ್ತಾನೆ. ತಾನು ಬೆಳೆವ ಗಿಡ ಎಷ್ಟು ಪ್ರಯೋಜನ ನೀಡುತ್ತೆ ಎಂಬುದರ ಮೇಲೆ ಅವಲಂಬಿಸಿರುತ್ತಾರೆ. ಅಂತಹ ರೈತರಿಗೆ ಇಲ್ಲೊಂದು ಕಡಿಮೆ ಹಣ ಖರ್ಚು ಮಾಡಿ, ದೊಡ್ಡ ಹಣ ಲಾಭ ಗಳಿಸಬಹುದಾದ ಬೆಳೆ ಇದೆ.ಅದ್ಯಾವುದೆಂದು ಮುಂದೆ ನೋಡಿ.
ಹೌದು. ನೀವು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಬೋದು ಈ ಬೆಳೆ ನೆದರ್‌ಲ್ಯಾಂಡ್ ಸೌತೆಕಾಯಿ ಕೃಷಿ. ಈ ಬೆಳೆಯ ಕಾಲಚಕ್ರ 60 ರಿಂದ 80 ದಿನಗಳಲ್ಲಿ ಮುಗಿಯುವುಂತದ್ದು.ಈ ಕೃಷಿಯಿಂದ ಉತ್ತಮ ಹಣ ಗಳಿಸುವುದು ಅಂತೂ ಪಕ್ಕ.
ಇನ್ನು ಈ ಸೌತೆಕಾಯಿಯನ್ನ ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ. ಆದ್ರೆ, ಮಳೆಗಾಲದಲ್ಲಿ ಸೌತೆಕಾಯಿಗೆ ಬೇಡಿಕೆ ಹೆಚ್ಚಿರುತ್ತೆ. ಇನ್ನು ಈ ಸೌತೆಕಾಯಿಯನ್ನ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಸಬಹುದು. ಸೌತೆಕಾಯಿ ಕೃಷಿಗಾಗಿ ಭೂಮಿಯ pH. 5.5 ರಿಂದ 6.8 ರವರೆಗಿದ್ರೆ ಉತ್ತಮ ಅಂತಾ ಪರಿಗಣಿಸಲಾಗಿದೆ. ಇನ್ನು ಸೌತೆಕಾಯಿ ಬೆಳೆಯನ್ನ ನದಿಗಳು ಮತ್ತು ಕೊಳಗಳ ದಡದಲ್ಲಿಯೂ ಬೆಳೆಸಬಹುದಾಗಿದೆ.
ಈ ಸೌತೆಕಾಯಿಯ ವಿಶೇಷತೆ ಅಂದ್ರೆ, ಈ ಸೌತೇಕಾಯಿಗಳಲ್ಲಿ ಯಾವುದೇ ಬೀಜಗಳಿರುವುದಿಲ್ಲ. ಈ ಕಾರಣದಿಂದಾಗಿ ದೊಡ್ಡ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಸೌತೆಕಾಯಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸಾಮಾನ್ಯ ಸೌತೆಕಾಯಿಗಳಿಗೆ ಹೋಲಿಸಿದ್ರೆ, ಇದರ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ದೇಶಿ ಸೌತೆಕಾಯಿ ಕೆಜಿಗೆ 20 ರೂ.ಗೆ ಮಾರಾಟವಾಗುತ್ತಿದ್ದರೆ, ನೆದರ್ಲ್ಯಾಂಡ್ ಸೌತೆಕಾಯಿ ಕೆಜಿಗೆ 40 ರಿಂದ 45 ರೂ.ಗೆ ಮಾರಾಟವಾಗುತ್ತಿದೆ.ಇದನ್ನು ವರ್ಷವಿಡೀ ಹಲವು ಬಗೆಯ ಖಾದ್ಯಗಳಲ್ಲಿ ಬಳಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ದುರ್ಗಾಪ್ರಸಾದ್ ಅನ್ನೋ ರೈತ, ಸೌತೆಕಾಯಿ ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಅವ್ರು ಹೇಳುವಂತೆ, ಕೃಷಿಯಲ್ಲಿ ಲಾಭ ಗಳಿಸಲು ತಮ್ಮ ಹೊಲಗಳಲ್ಲಿ ಸೌತೆಕಾಯಿ ಬಿತ್ತನೆ ಮಾಡಿ ಕೇವಲ 4 ತಿಂಗಳಲ್ಲಿ 8 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಅಂದ್ಹಾಗೆ, ಇವ್ರು ತಮ್ಮ ಹೊಲಗಳಲ್ಲಿ ನೆದರ್ಲ್ಯಾಂಡ್‌ನ ಸೌತೆಕಾಯಿಗಳನ್ನ ಬಿತ್ತಿದ್ದಾರೆ. ರೈತ ದುರ್ಗಾಪ್ರಸಾದ್ ಪ್ರಕಾರ, ಈ ನೆದರ್ಲ್ಯಾಂಡ್ ಜಾತಿಯ ಸೌತೆಕಾಯಿ ಬೀಜಗಳನ್ನ ಬಿತ್ತಿದ ಮೊದಲ ರೈತ ಇವರಾಗಿದ್ದಾರೆ.
ಇನ್ನು ತೋಟಗಾರಿಕೆ ಇಲಾಖೆಯಿಂದ 18 ಲಕ್ಷ ಸಹಾಯಧನ ಪಡೆದು ಜಮೀನಿನಲ್ಲಿಯೇ ಸೆಡ್ ನೆಟ್ ಮನೆ ನಿರ್ಮಿಸಿಕೊಂಡಿದ್ದೆ ಎಂದು ದುರ್ಗಾಪ್ರಸಾದ್ ಹೇಳುತ್ತಾರೆ. ಇನ್ನು ಸಬ್ಸಿಡಿ ತೆಗೆದುಕೊಂಡರೂ ಸ್ವಂತವಾಗಿ 6 ಲಕ್ಷ ರೂ. ಖರ್ಚಾಯಿತು. ಇನ್ನು ಇದಲ್ಲದೇ ನೆದರ್‌ಲ್ಯಾಂಡ್‌ನಿಂದ 72 ಸಾವಿರ ರೂಪಾಯಿ ಮೌಲ್ಯದ ಬೀಜಗಳನ್ನ ಪಡೆದಿದ್ದು, ಬಿತ್ತನೆ ಮಾಡಿದ 4 ತಿಂಗಳ ಬಳಿಕ 8 ಲಕ್ಷ ಮೌಲ್ಯದ ಸೌತೆಕಾಯಿ ಮಾರಾಟವಾಯ್ತು ಎಂದರು.