ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿ ಕೋರ್ಟ್ ಗೆ ಅಲೆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುತ್ತಾರೆ!!ಪರಸ್ಪರ ಟ್ವೀಟ್ ಮಾಡಿಕೊಂಡ ಕಾಂಗ್ರೆಸ್ v/s ಬಿಜೆಪಿ
ರಾಜ್ಯದಲ್ಲೀಗ ಉಪಚುನಾವಣೆಯ ಕಾವು ಹೆಚ್ಚಾದ ಬೆನ್ನಲ್ಲೇ ರಾಜ್ಯದ ಮೂರೂ ಪಕ್ಷಗಳು ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದೂ, ಈ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಹೊರಿಸಿಕೊಂಡು ಹಾವು ಮುಂಗುಸಿಗಳಂತೆ ಕಚ್ಚಾಡಿಕೊಳ್ಳುತ್ತಿವೆ.
ಮೊದಲಿಗೆ ಕಾಂಗ್ರೆಸ್ ನ ನಾಯಕರಾದ ಸಲೀಂ,ಉಗ್ರಪ್ಪ
ನಡುವಿನ ಸಂಭಾಷಣೆಯನ್ನು ಮುಂದಿಟ್ಟುಕೊಂಡು ಡಿ. ಕೆ ಶಿವಕುಮಾರ್ ವಿರುದ್ಧ ಟ್ವಿಟ್ ಮಾಡಿದ್ದ ಬಿಜೆಪಿ’ಕೆಪಿಸಿಸಿ ರಾಜ್ಯಾಧ್ಯಕ್ಷ ಈಗ ಭ್ರಷ್ಟಾಧ್ಯಕ್ಷ, ಡಿಕೆ ತಮ್ಮ ಪಕ್ಷದ ಕಚೇರಿಗೆ ಅಲೆಯುವುದಕ್ಕಿಂತಲೂ ಹೆಚ್ಚಾಗಿ ಕೋರ್ಟ್ ಗೆ ಅಲೆಯುತ್ತಿದ್ದಾರೆ, ಇದಕ್ಕೆಲ್ಲಾ ಅಕ್ರಮ ಸಂಪಾದನೆ, ಹಗರಣ ಕಾರಣ. ತಿಹಾರ್ ಊಟ ತಿಂದ ಕರ್ನಾಟಕದ ಏಕೈಕ ವ್ಯಕ್ತಿ, ಅವರ ಬಗೆಗೆ ಇಂದು ಸ್ವಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದಿದೆ.
ಇದಕ್ಕೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿದ ಕಾಂಗ್ರೆಸ್, ತಮ್ಮದೇ ಪಕ್ಷದ ಹಿರಿಯನನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಲು ಮುಂದಾಗಿರುವ ನೀವೇನು ಒಳ್ಳೆಯವರಲ್ಲ, ಬಿಎಸ್ ಯಡಿಯೂರಪ್ಪರವರನ್ನು ಐಟಿ ಬಲೆಗೆ ಬೀಳಿಸಲು ಪ್ರಯತ್ನನಿಸುತ್ತಿರುವ ನಿಮಗೆ ಪ್ರತಿಪಕ್ಷ ವಿಶೇಷವಲ್ಲ.
ಅದಲ್ಲದೇ ತಮ್ಮ ರಾಜ್ಯಾಧ್ಯಕ್ಷರು ಶ್ರೀಯುತ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಕಚೇರಿಗೆ ಅಲೆಯುವುದಕ್ಕಿಂತ ಹೆಚ್ಚು ಮಂಗಳೂರಿನ ಅವರ ಗೆಳತಿಯರ ಹಿಂದೆ ಅಲೆಯುತ್ತಾರೆ ಎಂಬ ಗುಸುಗುಸು ಇದೆ, ಇದು ನಿಜವೇ ಬಿಜೆಪಿ ಎಂಬ ಪ್ರಶ್ನೆ ಮಾಡಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾವು ಮುಂಗುಸಿಗಳಂತೆ ಕಚ್ಚಾಡುವ ರಾಜಕೀಯ ನಾಯಕರು ಹಲವಾರು ಬಾರಿ ಒಂದೇ ವೇದಿಕೆಯಲ್ಲಿ ಒಬ್ಬರಿಗೊಬ್ಬರು ಮುಖಾಮುಖಿಯಾದಾಗ ಪರಸ್ಪರ ಅಪ್ಪಿಕೊಂಡು ಹಾರೈಸಿಕೊಂಡ ಹಲವಾರು ಉದಾಹರಣೆಗಳಿವೆ. ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಒಬ್ಬರನೊಬ್ಬರು ಈ ರೀತಿ ದೂರುವುದು ನಾಟಕ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.