ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ|ಹುಬ್ಬಳ್ಳಿ ವಿಭಾಗದಲ್ಲಿ 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!!
ನವದೆಹಲಿ:ಉದ್ಯೋಗವಿಲ್ಲದೆ ಪರದಾಡುತ್ತಿರುವವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು,ನೈಋತ್ಯ ರೈಲ್ವೆಯು ಹುಬ್ಬಳ್ಳಿ ವಿಭಾಗದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರಿಷಿಯನ್, ವೆಲ್ಡರ್, ಫಿಟ್ಟರ್, ಕಾರ್ಪೆಂಟರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ರಾಜ್ಯದಲ್ಲಿಯೇ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಬೇಕೆಂದು ಹಂಬಲಿಸುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
SSLC ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 904 ಹುದ್ದೆಗಳು ಖಾಲಿ ಇದ್ದು, ನವೆಂಬರ್ 3ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು & ಹುದ್ದೆಗಳ ಸಂಖ್ಯೆ:
ಒಟ್ಟು ಹುದ್ದೆಗಳ ಸಂಖ್ಯೆ – 904
ಹುಬ್ಬಳ್ಳಿ ವಿಭಾಗ – 237 ಹುದ್ದೆಗಳು
ಕ್ಯಾರೇಜ್ ರಿಪೇರಿ ಕಾರ್ಯಾಗಾರ, ಹುಬ್ಬಳ್ಳಿ – 217 ಹುದ್ದೆಗಳು
ಬೆಂಗಳೂರು ವಿಭಾಗ – 230 ಹುದ್ದೆಗಳು
ಮೈಸೂರು ವಿಭಾಗ – 177 ಹುದ್ದೆಗಳು
ಕೇಂದ್ರ ಕಾರ್ಯಾಗಾರ, ಮೈಸೂರು – 43 ಹುದ್ದೆಗಳು
ರೈಲ್ವೆ ನೇಮಕಾತಿ ವಯಸ್ಸಿನ ಮಿತಿ:
ಸಾಮಾನ್ಯ ಅಭ್ಯರ್ಥಿಗಳು 15 ವರ್ಷ ಪೂರ್ಣಗೊಳಿಸಿರಬೇಕು ಮತ್ತು 24 ವರ್ಷ ಪೂರ್ಣಗೊಳಿಸಿರಬಾರದು. ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳನ್ನು ಮೆಟ್ರಿಕ್ಯುಲೇಷನ್ ಮತ್ತು ಐಟಿಐ(ITI)ಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯಾ ಟ್ರೇಡ್‌ನಲ್ಲಿ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrchubli.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 04-10-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-11-2021
ಅರ್ಜಿ ಶುಲ್ಕ:
ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಕಟ್ಟಬೇಕು. ಎಸ್ಸಿ, ಎಸ್ಟಿ, ಮಹಿಳೆಯರು ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಡೆಬಿಡ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನೈಋತ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ swr.indianrailways.gov.in ಭೇಟಿ ನೀಡಬಹುದು.