ಭಾರತದ ಪ್ರಧಾನಿ ನರೇಂದ್ರ ಮೋದಿಯ ಕಣ್ಣು ಕೆಂಪಾದರೆ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಕುಸಿದು ಬೀಳಲಿದೆ | ಪಿಸಿಬಿ ಚೇರ್ಮೆನ್ ರಮೀಜ್ ರಾಜಾ ಹೇಳಿಕೆ ವೈರಲ್
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇದುವರೆಗೂ ಐಸಿಸಿ ನೀಡುತ್ತಿದ್ದ 50% ಫಂಡಿಂಗ್ ನಿಂದ ಕಾರ್ಯಾಚರಿಸುತ್ತಿತ್ತು. ಆದರೆ ಇದೀಗ ಭಾರತದಿಂದ ಪಿಸಿಬಿಗೆ ಒಂದು ಭಯ ಶುರುವಾಗಿದೆ. ಅದುವೇ ನಮ್ಮ ಪ್ರಧಾನಿಯ ಮುಂದಿನ ನಡೆ. ಈ ಬಗ್ಗೆ ಪಿಸಿಬಿ ಚೇರ್ಮೆನ್ ಭಾರತದ ಮುಂದಿನ ನಡೆಯ ಬಗ್ಗೆ ಚಿಂತಿತರಾಗಿದ್ದು, ಅವರು ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ.
ನಾಳೆ ಭಾರತದ ಪ್ರಧಾನ ಮಂತ್ರಿ, ಪಾಕಿಸ್ತಾನ ಕ್ರಿಕೆಟ್‌ಗೆ ಫಂಡ್ ಮಾಡಬಾರದು ಎಂದು ಯೋಚಿಸಿದಲ್ಲಿ,ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಕುಸಿದುಬೀಳಬಹುದು ಎಂದು ಪಿಸಿಬಿ ಚೇರ್‌ಮನ್ ರಮೀಜ್ ರಾಜ ಹೇಳಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಶೇಕಡ 50ರಷ್ಟು ಫಂಡಿಂಗ್ ಐಸಿಸಿಯಿಂದ ಬರುತ್ತದೆ. ಐಸಿಸಿಯನ್ನು ಶೇಕಡ 90 ರಷ್ಟು ಫಂಕ ಮಾಡುವುದು ಭಾರತದ ಮಾರುಕಟ್ಟೆ, ಆದ್ದರಿಂದ ಪಾಕ್ ಕ್ರಿಕೆಟ ಅಸ್ತಿತ್ವ ಭಾರತದ ಬಿಸಿನೆಸ್ ಹೌಸ್‌ಗಳ ಕೈಯಲ್ಲಿದೆ. ನಾಳೆ ಭಾರತ
ಪ್ರಧಾನಿ ಪಿಸಿಬಿಗೆ ಫಂಡ್ ಮಾಡಬಾರದು ಎಂದು ಯೋಚಿಸಿದ ನಮ್ಮ ಕ್ರಿಕೆಟ್ ಬೋರ್ಡ್ ಕುಸಿದುಬೀಳುತ್ತದೆ. ಇದು ಭಯ
ಹುಟ್ಟಿಸುವ ವಿಚಾರವಾಗಿದೆ’ ಎಂದು ರಾಜಾ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸಂಬಂಧದ ಉನ್ನತ ಮಟ್ಟದ ಸಭೆಯೊಂದರಲ್ಲಿ ರಾಜ ಈ ಮಾತುಗಳನ್ನು ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಐಸಿಸಿ ಮೇಲಿನ ಅವಲಂಬನೆಯನ್ನು ಪಿಸಿಬಿ ಕಡಿಮೆ
ಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು, ಜೊತೆಯಲ್ಲೇ ಪಾಕ್ ಕ್ರಿಕೆಟ್‌ಗೆ ದೇಶೀಯವಾಗಿ ಪೂರಕ ಅರ್ಥವ್ಯವಸ್ಥೆ ಕಲ್ಪಿಸುವುದು ಬಹಳ ಮುಖ್ಯ ಎಂದಿದ್ದಾರೆ ಎಂದು ವರದಿ ತಿಳಿಸಿದೆ.