ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಹನ್ನೊಂದನೇ ಪದಕ | ಹೈಜಂಪ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಪ್ರವೀಣ್ ಕುಮಾರ್

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇದೀಗ ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ 11ನೇ ಪದಕವನ್ನು ತಂದು ಕೊಟ್ಟಿದ್ದಾರೆ.

https://twitter.com/ParalympicIndia/status/1433636955246505986?s=20

ವಿಶೇಷ ಚೇತನರಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ,ಭಾರತದ ಪ್ಯಾರಾ ಹೈ ಜಂಪರ್ ಪ್ರವೀಣ್ ಕುಮಾರ್ ಶುಕ್ರವಾರ ಪುರುಷರ ಹೈ ಜಂಪ್ – ಟಿ 44 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 18 ವರ್ಷದ ಪ್ರವೀಣ್ ಕುಮಾರ್, 2.07 ಮೀಟರ್ ಎತ್ತರಕ್ಕೆ ಜಿಗಿದು ನೂತನ ಏಷ್ಯಾ ದಾಖಲೆ ಬರೆದರು.

ಭಾರತ ಇದುವರೆಗೆ ಎರಡು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಸದ್ಯ ಪದಕ ಪಟ್ಟಿಯಲ್ಲಿ 36ನೇ ಸಾಧನೆಯಲ್ಲಿದೆ.

ಒಲಿಂಪಿಕ್ ಕ್ರೀಡಾಂಗಣದಲ್ಲಿ ಮಳೆಯಿಂದ ನೆನೆದ ಟ್ರ್ಯಾಕ್‌ನಲ್ಲಿ, ಕುಮಾರ್ ತನ್ನ ಮೊದಲ ಪ್ರಯತ್ನದಲ್ಲಿ 1.83 ಅಡಿ ಎತ್ತರವನ್ನು 1.88 ಮೀ ನೇರವಾಗಿ ಜಿಗಿಯುವ ಮೂಲಕ ಯಶಸ್ಸು ಕಂಡಿದ್ದರು. ಇನ್ನು 1.93 ಮೀ ಮಾರ್ಕ್​ ಅನ್ನು ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ 1.97 ಮೀ ಜಿಗಿಯುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದ್ದರು.

ಕುಮಾರ್ 2.01 ಮೀ ಮಾರ್ಕ್ ಜಿಗಿತ ಸಾಧಿಸಲು ಎರಡು ಪ್ರಯತ್ನಗಳನ್ನು ತೆಗೆದುಕೊಂಡಿದ್ದಾರೆ. ಕುಮಾರ್ ತನ್ನ ಮೊದಲ ಪ್ರಯತ್ನದಲ್ಲಿ 2.04 ಮೀ ಜಿಗಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 2.07 ಮೀ ಮಾರ್ಕ್ ಜಿಗಿಯಲು ಸಾಧ್ಯವಾಗಲಿಲ್ಲ. ಆದರೆ, ಎರಡನೆ ಪ್ರಯತ್ನದಲ್ಲಿ ಕುಮಾರ್ ಅದನ್ನು ಸಾಧಿಸಿದ್ದರೂ, ಇನ್ನು ಪ್ರತಿ ಸ್ಪರ್ಧಿಗಳಾದ ಬ್ರೂಮ್ ಮತ್ತು ಲೆಪಿಯಾಟೊ ವಿಫಲರಾಗಿದ್ದರು. ಅಲ್ಲದೆ, ಲೆಪಿಯಾಟೊ ಕೂಡ ತನ್ನ ಮೂರನೇ ಪ್ರಯತ್ನದಲ್ಲಿ ವಿಫಲವಾದ ಕಾರಣ ಪ್ರವೀಣ್ ಅವರಲ್ಲಿ ಬೆಳ್ಳಿ ಪದಕ ಗೆಲ್ಲುವ ಭರವಸೆ ಹುಟ್ಟಿತ್ತು. ಆದರೆ 2.10 ಮೀ ಮಾರ್ಕ್​ ನಲ್ಲಿ ಬ್ರೂಮ್ ತನ್ನ ಎರಡನೇ ಪ್ರಯತ್ನದಲ್ಲಿ 2.10 ಮೀ ಮಾರ್ಕ್ ಸಾಧಿಸಿದ್ದರು, ಅದನ್ನು ಪ್ರವೀಣ್ ತನ್ನ ಮೂರು ಪ್ರಯತ್ನಗಳಲ್ಲಿ ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ ಹೈ ಜಂಪ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಇದೇ ಪಂದ್ಯದಲ್ಲಿ ಬ್ರಿಟನ್ ನ ಜೋನಾಥನ್ ಬ್ರೂಮ್ ಎಡ್ವರ್ಡ್ಸ್ ಅವರು 2.10 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದರೆ, 2.04 ಮೀಟರ್ ಎತ್ತರಕ್ಕೆ ಜಿಗಿದ ಪೋಲೆಂಡ್ ನ ಮ್ಯಾಕೀಜ್ ಲೆಪಿಯಾಟೊ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಇನ್ನು ಪ್ರವೀಣ್ ಅವರ ಒಂದು ಕಾಲು ಹುಟ್ಟಿನಿಂದ ಚಿಕ್ಕದಾಗಿತ್ತು. ಅವರು ತಮ್ಮ ಶಾಲಾ ಸ್ನೇಹಿತರೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು, ಆರಂಭದಲ್ಲಿ ವಾಲಿಬಾಲ್ ಅವರ ನೆಚ್ಚಿನ ಆಟವಾಗಿತ್ತು. ಒಮ್ಮೆ ಅವರು ಸಮರ್ಥರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದರೆ ನಂತರ ಅವರು ದೈಹಿಕ ಅಂಗವಿಕಲರಿಗಾಗಿ ಕ್ರೀಡೆಗಳಿವೆ ಎಂಬುದನ್ನ ತಿಳಿದುಕೊಂಡು ಡಾ.ಸತ್ಯಪಾಲ್ ಸಿಂಗ್ ಅವರ ಅಡಿಯಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದರು.

ಈ ಹಿಂದೆ ಪುರುಷರ ಹೈ ಜಂಪ್​ ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಇವರು ಟಿ 47 ಹೈ ಜಂಪ್​ನಲ್ಲಿ 2.06 ಮೀಟರ್ ಜಿಗಿದಿದ್ದರು. ಈ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಸದ್ಯ ಪ್ರವೀಣ್ 2.07 ಮೀಟರ್ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ.

ಇನ್ನೂ 25 ಮೀ. ಪಿಸ್ತೂಲ್‌ ಮಿಶ್ರ ವಿಭಾಗದ ಎಸ್‌ಎಚ್‌1 ಸ್ಪರ್ಧೆಯಲ್ಲಿ ಶೂಟರ್‌ ರಾಹುಲ್‌ ಜಕ್ಕರ್‌ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ 576 ಅಂಕಗಳೊಂದಿಗೆ 2ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದ್ದ ಜಕ್ಕರ್‌ ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು. ಭಾರತದ ಇನ್ನೊಬ್ಬ ಸ್ಪರ್ಧಿ ಆಕಾಶ್‌ ಅರ್ಹತಾ ಸುತ್ತಿನಲ್ಲಿ 20ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದರು.

ಪುರುಷರ ಶಾಟ್‌ಪುಟ್‌ನ ಎಫ್‌35 ಸ್ಪರ್ಧೆಯ ಫೈನಲ್‌ನಲ್ಲಿ ಅರವಿಂದ್‌ ಪದಕ ಗೆಲ್ಲಲು ವಿಫಲರಾದರು. ಅರವಿಂದ್‌ 13.48 ಮೀ. ದೂರಕ್ಕೆ ಶಾಟ್‌ಪುಟ್‌ ಎಸೆದು 7ನೇ ಸ್ಥಾನ ಪಡೆದರು. 16.13 ಮೀ. ದೂರ ಎಸೆದ ಉಜ್ಬೇಕಿಸ್ತಾನದ ಖುಸ್ನಿದ್ದಿನ್‌ ಚಿನ್ನ ಗೆದ್ದುಕೊಂಡರು.

Leave A Reply

Your email address will not be published.