ಹೊಸ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಧೋನಿ ಪ್ರತ್ಯಕ್ಷ | ಭಾರತೀಯ ಕಿಲಾಡಿ ಹುಡುಗೀರ ಮನದಲ್ಲಿ ಬೆಚ್ಚನೆಯ ಕಲರವ !

Share the Article

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹೊಸ ವ್ಯಕ್ತಿತ್ವದಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಒಂದು ಕಾಲಕ್ಕೆ ತಮ್ಮ ಆಟದ ಜತೆಗೆ ವಿಭಿನ್ನ ಉದ್ದ ಕೂದಲಿನಿಂದ ಜನರನ್ನು ಆಕರ್ಷಿಸಿದ ಇದೇ ಧೋನಿ, ಈಗ ಮತ್ತೆ ಹೇರ್ ಸ್ಟೈಲ್ ನಲ್ಲಿ ಟ್ರೆಂಡ್ ಎಬ್ಬಿಸಿದ್ದಾರೆ. ಕಾಲಕಾಲಕ್ಕೆ ವಿಭಿನ್ನವಾಗಿ ಹೇರ್ ಕಟ್ ಮಾಡಿಸಿಕೊಳ್ಳುವ ಅವರು ಈ ಹೇರ್ ಸ್ಟೈಲ್ ಟ್ರೆಂಡ್ ಅನ್ನು ಹುಟ್ಟುಹಾಕಿದ್ದಾರೆ.

ಇದೀಗ ಧೋನಿ ಹೊಸ ಬಗೆಯ ಹೇರ್ ಕಟ್ ಶೋಧನೆ ಮಾಡಿದ್ದು, ಆ ಕಟಿಂಗ್ ಈಗ ಸಕ್ಕತ್ ಸುದ್ದಿಯಾಗುತ್ತಿದೆ. ಸೆಲೆಬ್ರಿಟಿಗಳ ಕೇಶ ವಿನ್ಯಾಸ ಮಾಡುವ ಆಲಿಮ್ ಹಕೀಮ್ ವರು ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಧೋನಿಯವರ ಹೊಸ ಅವತಾರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಧೋನಿಯವವರು ಇತ್ತೀಚೆಗೆ ಜನರಿಗೆ ಫ್ಯಾಮಿಲಿ ಮ್ಯಾನ್ ಥರ ಕಾಣಲು ಆರಂಭಿಸಿದ್ದರು. ಈಗ ಬಂದ ಈ ಸ್ಟೈಲ್ ಅವರಿಗೆ ಇನ್ನೊಂದು ಮೇಕ್ ಓವರ್ ನೀಡಿದ್ದು, ಭಾರತದ ಕಿಲಾಡಿ ಹುಡುಗೀರ ಮನದಲ್ಲಿ ಹೊಸ ಕಲರವ ಸೃಷ್ಟಿಯಾಗಿದೆ. ಮತ್ತೆ ಇನ್ನೊಮ್ಮೆ ಧೋನಿ ನ್ಯಾಷನಲ್ ಕ್ರಷ್ ಆಗೋ ಮಾತು ಎದ್ದಿರುವಿದು ಸುಳ್ಳಲ್ಲ.

Leave A Reply