ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ? | ಈ ಮದುವೆ ಅಸಿಂಧು ಎಂಬ ಗಂಭೀರ ಆರೋಪ ಮಾಡಿದ ಮುಸ್ತಾಫಾನ ಮೊದಲ ಪತ್ನಿ

Share the Article

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಮಡದಿ ಆಯೇಷಾ ಹೇಳಿದ್ದಾರೆ. ತಾನಿನ್ನೂ ಮುಸ್ತಾಫಾ ಪತ್ನಿ ಎಂದು ಅವರು ಹೇಳಿಕೊಂಡಿದ್ದು, ತಮಗೆ ಡೈವೋರ್ಸ್ ನೀಡದೆ ನಟಿ ಪ್ರಿಯಾಮಣಿಯನ್ನು ಪತಿ ಮುಸ್ತಾಫಾ ಮದುವೆ ಆಗಿದ್ದಾರೆಂದು ಆಯೇಷಾ ಗಂಭೀರ ಆರೋಪ ಮಾಡಿದ್ದಾರೆ.

2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿ ಎರಡು ಮಕ್ಕಳಿದ್ದು, ಪತ್ನಿಯಿಂದ ದೂರವಾದ್ರೂ ಮುಸ್ತಾಫಾ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮೊದಲ ಪತ್ನಿಯಿಂದ ದೂರವಾದ ಬಳಿಕ 2017 ರಲ್ಲಿ ಪ್ರಿಯಾಮಣಿಯನ್ನ ಮುಸ್ತಾಫಾ ಮದುವೆಯಾಗಿದ್ದರು. ಸರಳವಾಗಿ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದ ಜೋಡಿ, ಆನಂತರ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದರು. ಆದ್ರೆ ಪ್ರಿಯಾಮಣಿಯನ್ನ ಮದುವೆಯಾಗುವ ವೇಳೆ ಮುಸ್ತಾಫಾ ತಾವಿನ್ನೂ ಸಿಂಗಲ್ ಎಂದು ದಾಖಲಿಸಿದ್ದಾರೆ ಎಂದು ಆತನ ಮೊದಲನೇ ಪತ್ನಿ ಆಯೇಷಾ ದೂರಿದ್ದಾಳೆ.

‘ನಾನಿನ್ನೂ ಮುಸ್ತಾಫಾ ರಾಜ್ ಪತ್ನಿಯಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿಲ್ಲ. 2017ರಲ್ಲಿ ಪ್ರಿಯಾಮಣಿ ಅವರನ್ನ ಮದುವೆಯಾಗುವಾಗ ಮುಸ್ತಾಫಾ ನ್ಯಾಯಾಲಯಕ್ಕೆ ತಾವು ಬ್ಯಾಚೂಲರ್ ಅಂತ ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ಮಧ್ಯೆ ವಿಚ್ಛೇದನವೇ ಆಗದೇ ಆತ ಮದುವೆಯಾಗಲು ಹೇಗೆ ಸಾಧ್ಯ? ಹಾಗಾಗಿ ಇಬ್ಬರ ಮದುವೆ ಕಾನೂನಿನ ಪ್ರಕಾರ ಅಸಿಂಧು ಎಂದಿದ್ದಾಳೆ ಆಯೇಷಾ. ನಾನು ಸರಿಯಾದ ದಾರಿಯಲ್ಲಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದೆ. ಆದ್ರೆ ಅದು ಫಲಪ್ರದವಾಗಲಿಲ್ಲ. ಹಾಗಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ‘ ಎಂದು ಆಯೇಷಾ ಹೇಳಿದ್ದಾರೆ.

ಆಯೇಷಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಸ್ತಾಫಾ ರಾಜ್, ‘ ಮಕ್ಕಳಿಗಾಗಿ ಮತ್ತು ಹಳೆಯ ಪತ್ನಿಗೆ ಹಣ ನೀಡುತ್ತಿದ್ದೇನೆ. 2017 ರಲ್ಲಿ ಮದುವೆಯಾದ್ರೂ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಈಗ ಆರೋಪಗಳನ್ನು ಮಾಡುತ್ತಿರೋದೇಕೆ? ಇದು ನನ್ನಿಂದ ಹೆಚ್ಚು ಹಣ ಪಡೆದುಕೊಳ್ಳುವ ಹುನ್ನಾರ ‘ ಎಂದು ಮರು ಮುಸ್ತಾಫಾ ಮರು ಆರೋಪ ಮಾಡಿದ್ದಾರೆ.

Leave A Reply

Your email address will not be published.