ಮಾಮಿಗೆ ಬಾಯ್ ಫ್ರೆಂಡ್ ಬೇಕೆಂದು ಜಾಹೀರಾತು ನೀಡಿದ ಸೊಸೆ | ಕೇವಲ 2 ದಿನಕ್ಕೆ ಮಾತ್ರ ಬೇಕಂತೆ ಆ ಹೊಸ ಮಾವ !!
ನ್ಯೂಯಾರ್ಕ್ : ಈ ಕಾಲದಲ್ಲಿ ಜಾಹೀರಾತು ನೀಡದೆ, ಅಟ್ ಲೀಸ್ಟ್ ಫೇಸ್ ಬುಕ್, ವಾಟ್ಸಾಪ್ ಮತ್ತು ಇನ್ಸ್ಟ ದಲ್ಲಿ ಹಾಕದೇ ಏನೂ ಕೂಡ ಜರುಗುವುದಿಲ್ಲ, ಹಾಗಾಗಿದೆ. ಆದರೆ ಇಲ್ಲಿ ಸೊಸೆಯೊಬ್ಬಳು ತನ್ನ ‘ ಬಾಯ್ಫ್ರೆಂಡ್ ಬೇಕಾಗಿದ್ದಾನೆ ‘ ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾಳೆ.
ಅದು ವಿಪರೀತ ಸುದ್ದಿಯಾಗಲು ಕಾರಣ ಕೂಡಾ ಇದೆ. ಅಷ್ಟಕ್ಕೂ ಬಾಯ್ಫ್ರೆಂಡ್ ಕೇಳಿರುವುದು ತನಗಲ್ಲ, ತನ್ನ 51 ಅತ್ತೆಗೆ!. ಅದೂ ಒಂದು ಸ್ಪೆಷಲ್ ಕಂಡೀಷನ್ ನೊಂದಿಗೆ.
ನ್ಯೂಯಾರ್ಕ್ನ ಹಡ್ಸನ್ ನ ನಿವಾಸಿಯಾದ ಮಹಿಳೆಯು ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್ಫ್ರೆಂಡ್ ಬೇಕು ಎಂದು ಜಾಹೀರಾತು ನೀಡಿದ್ದಾಳೆ. ತನ್ನ ಮಾವ ಊರಿನಲ್ಲಿ ಇಲ್ಲ. ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ತನ್ನ ಅತ್ತೆಗೆ ಬಾಯ್ಫ್ರೆಂಡ್ ಬೇಕಾಗಿದ್ದಾನೆ. ವಯಸ್ಸು 40 -60 ವರ್ಷದ ಒಳಗೆ ಇರಬೇಕು. ಇದು ಕೇವಲ ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕ. ಆಯ್ಕೆಯಾದ ವ್ಯಕ್ತಿಗೆ ಒಂದು ಸಾವಿರ ಡಾಲರ್ (ಸುಮಾರು 75 ಸಾವಿರ ರೂಪಾಯಿ) ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ. ಅಲ್ಲದೆ ಈ ನೇಮಕಾತಿ ತಾತ್ಕಾಲಿಕವಾಗಿದ್ದು, ನೇಮಕಾತಿಯ ಅವಧಿ ಕೇವಲ ಎರಡು ದಿನಗಳು ಮಾತ್ರ !
ಜಾಹೀರಾತಿನಲ್ಲಿ, ಯಾವ ಕಾರಣಕ್ಕಾಗಿ ಈ ನೇಮಕಾತಿ ಮಾಡಲಾಗುತ್ತಿದೆ ಎಂಬುದನ್ನು ಕೂಡಾ ಬರೆಯಲಾಗಿದೆ. ಅತ್ತೆಗೆ ಪಕ್ಕದ ಊರಿಗೆ ಮದುವೆಯೊಂದಕ್ಕೆ ಹೋಗಲಿಕ್ಕೆ ಇದೆ. ಅದಕ್ಕಾಗಿ, ಈ ಬಾಯ್ಫ್ರೆಂಡ್ ಬೇಕಾಗಿರುವುದು.
ಬಾಯ್ಫ್ರೆಂಡ್ ಆಗಬಯಸುವ ವ್ಯಕ್ತಿಗೆ ಇನ್ನಿತರ ಅರ್ಹತೆಗಳು ಬೇಕಾಗಿದ್ದು ಮುಖ್ಯವಾಗಿ ಆತನಿಗೆ ನೃತ್ಯ ಮಾಡಲು ತಿಳಿದಿರಬೇಕು. ಹಾಗೂ ಆತ ಉತ್ತಮ ಸಂಭಾಷಣೆ ನಡೆಸುವವನಾಗಿರಬೇಕು ಎಂದೂ ಹೇಳಲಾಗಿದೆ.
ಅನೇಕರು ಇಂತಹ ಜಾಹೀರಾತನ್ನು ನೀಡುವ ಅಗತ್ಯ ಏನು ಎಂಬ ಬಗ್ಗೆ ಇದೀಗ ಚರ್ಚೆ ನಡೆಸುತ್ತಿದ್ದಾರೆ. ನಿಜಕ್ಕೂ ಎರಡು ದಿನದ ಮಟ್ಟಿಗೆ ಅತ್ತೆಯ ಪ್ರಯಾಣಕ್ಕೆ ಸಾಥ್ ಕೊಡಲು ವ್ಯಕ್ತಿಯನ್ನು ಹುಡುಕುತ್ತಿದ್ದಾರೆಯಾ ಅಥವಾ ಇದೊಂದು ಪ್ರಚಾರ ಪಡೆಯುವ ತಂತ್ರವಾ ? ಗೊತ್ತಿಲ್ಲ. ಆದರೆ ಅತ್ತೆಯ ಪ್ರೀತಿಯ ಸೊಸೆಯಂತೂ, ತನ್ನ ಮಾಮಿಯ ಇನ್ನೇನು ನೆರಿಗೆ ಸ್ಪಷ್ಟವಾಗುತ್ತಿರುವ ಮುಖದಲ್ಲಿ ಸ್ಮೈಲ್ ಮೂಡಿಸಿದ್ದಾಳೆ. ಮಾವನ ಫೀಡ್ ಬ್ಯಾಕ್ ಏನಿರಬಹುದು ಎಂದು ನೀವೇ ಊಹಿಸಿಕೊಳ್ಳಿ.