ಕಡಿಮೆ ಅಂತರದ ದೇಶೀಯ ವಿಮಾನಯಾನದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ವಿಮಾನಯಾನ ಸಚಿವಾಲಯ

 

ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿ ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದಲೇ ಜಾರಿಗೆ ಬರಲಿದೆ.

ಶುಕ್ರವಾರ ಕೇಂದ್ರ ಸಚಿವಾಲಯದ ನೀಡಿದ ಆದೇಶದಂತೆ, 40 ನಿಮಿಷಗಳಿಗಿಂತ ಕಡಿಮೆ ಅವಧಿಯ ದೇಶೀಯ ಪ್ರಯಾಣದ ದರವನ್ನು  2,300 ರೂ.ಗಳಿಂದ 2,600 ರೂ.ಗೆ ಹೆಚ್ಚಿಸಲಾಗುವುದು, ಇದು ಪ್ರಸ್ತುತ ದರದ ಶೇಕಡಾ 13 ರಷ್ಟು ಆಗಿದೆ.

ಉಳಿದ ಪ್ರಯಾಣದ ದರ ವಿವರ

40 ನಿಮಿಷದಿಂದ ಒಂದು ಗಂಟೆಯ ನಡುವಿನ ಅವಧಿಯನ್ನು ಹೊಂದಿರುವ ವಿಮಾನಗಳು 3,300 ರೂ.ಗಳ ದರ ಹೊಂದಿರಲಿದೆ. ಇದಕ್ಕೆ ಹಿಂದೆ ಇವುಗಳಿಗೆ 2,900 ರೂ. ದರವಿತ್ತು.

ಅಂತೆಯೇ, 60-90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90-120 ನಿಮಿಷ 4,700 ರೂ, 150-180 ನಿಮಿಷ 6,100 ಮತ್ತು 180-210 ನಿಮಿಷಗಳಿಗೆ 7,400 ರೂ. ನಿಗದಿಪಡಿಸಲಾಗುವುದು.

ದೇಶದಲ್ಲಿ ಇಳಿಯುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆ ವಿಮಾನಯಾನ ದರದ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಸೋಂಕಿನ ಹೆಚ್ಚಳ  ದೇಶೀಯ ವಾಯುಯಾನದಲ್ಲಿ ಇಳಿಕೆಯನ್ನು ತಂದಿದೆ.”ದೇಶಾದ್ಯಂತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಉಲ್ಬಣ, ಪ್ರಯಾಣಿಕರ ದಟ್ಟಣೆ ಇಳಿಕೆ ಗಮನದಲ್ಲಿಟ್ಟುಕೊಂಡು, ಈಗಿರುವ ಶೇ .80 ರಷ್ಟು ಸಾಮರ್ಥ್ಯದ ಕ್ಯಾಪ್ ಅನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಎಂದು ಪರಿಗಣಿಸಬಹುದು ” ಎಂದು ಸಚಿವಾಲಯದ ಆದೇಶ ಹೇಳಿದೆ.

ಮೇಲೆ ತಿಳಿಸಿದ ದೇಶೀಯ ಶುಲ್ಕ ಬೆಲೆ ಮಿತಿಯಲ್ಲಿ ತೆರಿಗೆಗಳು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕಗಳು (ಎಡಿಎಫ್) ಇರುವುದಿಲ್ಲ, ಇದನ್ನು ಪ್ರಯಾಣಿಕರು ಬೇರೆ ಪಾವತಿಸಬೇಕಾಗುತ್ತದೆ.

Leave A Reply

Your email address will not be published.