ಆಕೆಯ ದೇಹದಲ್ಲಿ ಕೊರೋನಾ ಗಮ್ಮತ್ತು ಪಾರ್ಟಿ ಮಾಡುತ್ತಿತ್ತಂತೆ !

ಬಾಲಿವುಡ್ ನಟಿ, ಕಾಂಟ್ರವರ್ಸಿ ರಾಣಿ ಕಂಗನಾ ರಾಣಾವತ್ ಕಂಗನಾ ರಣಾವುತ್ ಗೆ ಕೋವಿಡ್ ಸೋಂಕು ತಾಗಿರವುದು ದೃಢವಾಗಿದೆ.

 

ಈ ಬಗ್ಗೆ ಸ್ವತಃ ಕಂಗನಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಬರುತ್ತಿದ್ದಂತೆ ಆಕೆ ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದಾಳೆ.

ಆಗ ಆಕೆಗೆ ಪಾಸಿಟಿವ್ ಬಂದಿದೆ. ‘ ಕಳೆದ ಕೆಲವು ದಿನಗಳಿಂದ ದಣಿವಾದ ಅನುಭವವಾಗುತ್ತಿತ್ತು. ಕಣ್ಣುಗಳು ಉರಿಯುತ್ತಿತ್ತು. ಹೀಗಾಗಿ ನಾನು ಕೋವಿಡ್ ಪರೀಕ್ಷೆ ನಡೆಸಿದ್ದೆ. ವರದಿ ಪಾಸಿಟಿವ್ ಎಂದ ಬಂದಿದೆ ‘ ಎಂದಾಕೆ ಹೇಳಿಕೊಂಡಿದ್ದಾರೆ.

ನಾನೀಗ ಕ್ಯಾರಂಟೈನ್ ಆಗಿದ್ದೇನೆ. ‘ ಈ ಕೊರೋನಾ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ. ಆದರೂ ನನಗದು ಗೊತ್ತೇ ಆಗಲಿಲ್ಲ. ನಾನಿದನ್ನೂ ಹೊಡೆದುರುಳಿಸುತ್ತೇನೆ ಎಂಬ ನಂಬಿಕೆ ನನಗಿದೆ. ನಮಗಿಂತ ದೊಡ್ಡ ಶಕ್ತಿ ಬೇರೆನೂ ಇಲ್ಲ. ಜನರು ಕೋವಿಡ್ ಸೋಂಕಿಗೆ ಭಯ ಪಡಬಾರದು. ನೀವು ಭಯಪಟ್ಟರೆ ಅದು ನಿಮ್ಮನ್ನು ಮತ್ತಷ್ಟು ಭಯ ಪಡಿಸುತ್ತದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

Leave A Reply

Your email address will not be published.