ಕೊರೊನಾದ ಬಗ್ಗೆ ಅರಿತಿರುವವರೇ ತಪ್ಪು ಮಾಡುತ್ತಿರುವುದು ಎಷ್ಟು ಸರಿ? ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದನ್ನು ಮೊದಲು ನಿಲ್ಲಿಸಿ !
ಕೊರೊನಾ….. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಭಯ ಹುಟ್ಟಿಸಿದ್ದು ಅಲ್ಲದೇ ಜನರ ಜೀವನವನ್ನೇ ಅಸ್ತವ್ಯಸ್ತವಾಗಿಸಿತು. ಮುಖಕ್ಕೆ ಮಾಸ್ಕ್ ಧರಿಸಿ ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದ್ದೇವೆ. ತಿನ್ನಲು ಸರಿಯಾಗಿ ಸಿಗದೇ ಪ್ರಾಣ ಕಳೆದುಕೊಂಡವರು, ಕೆಲಸವನ್ನು ಕಳೆದುಕೊಂಡವರು ಇದ್ದಾರೆ. ಜೀವನದಲ್ಲಿ ಅಮೂಲ್ಯವಾದ ಕೆಲವೊಂದನ್ನು ಕಳೆದುಕೊಂಡಿದ್ದೇವೆ. ಏನೆಲ್ಲಾ ಆಗಿಹೋಗಿದೆ. ಆಗುತ್ತಿದೆ ಕೂಡ. ಇಷ್ಟಾದರೂ ಜನರಿಗೆ ಬುದ್ಧಿ ಇದೆಯೇ…??
ಎರಡನೇ ಕೊರೊನಾ ಅಲೆಯನ್ನು ನಿಯಂತ್ರಿಸಲು ಸಕಾ೯ರ ಬೆಳಗ್ಗೆ 6 ರಿಂದ 10 ರವರೆಗೆ ವಸ್ತುಗಳ ಖರೀದಿಗೆ ಅವಕಾಶವನ್ನು ನೀಡಿತು. ಆದರೆ ಯಾವುದೇ ನೂಕು ನುಗ್ಗಲು ಇಲ್ಲದೇ ವ್ಯಾಪಾರ ನಡೆಯಲಿಲ್ಲ. ಕಾರಣ ಸಮಯದ ಕೊರತೆಯಂತೂ ಖಂಡಿತ ಅಲ್ಲನಮ್ಮ ರಾಜ್ಯದಲ್ಲಿ ವಿದ್ಯಾವಂತರೂ, ಶ್ರೀಮಂತರೂ ಎನಿಸಿಕೊಂಡ ಜನಗಳು ಬರುವುದು ಅಂಗಡಿಗಳ ಬಾಗಿಲು ಮುಚ್ಚಲು ಸಮಯವಾಗುವ ಹೊತ್ತಿನಲ್ಲಿ. ಕೇವಲ 9 ಗಂಟೆಯಿಂದ 10 ಗಂಟೆಯವರೆಗೆ ಅಂಗಡಿಗಳಲ್ಲಿ ನೂಕು ನುಗ್ಗಲಿನಲ್ಲಿ ನಿಲ್ಲುವವರು ಇವರೆ. ಸಕಾ೯ರದ ಕಾನೂನು ಅರಿತವರೇ ಈ ತಪ್ಪುಗಳನ್ನು ಮಾಡುವುದು ಎಷ್ಟು ಸರಿ??. ಅದರ ನಡುವೆ ಜಾಸ್ತಿ ಜನಗಳು ಕಂಡಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದನ್ನು ಮೊದಲು ನಿಲ್ಲಿಸಿ.
ವಿಧ್ಯಾಭ್ಯಾಸ ಇಲ್ಲದ, ಕೂಲಿ ಕೆಲಸ ಮಾಡುವ ಜನಗಳು ಕಾನೂನಿಗೆ ಹೆದರಿ ಯಾದರೂ ನಿಯಮವನ್ನು ಪಾಲಿಸುತ್ತಾರೆ. ಅರಿತವರೇ ದಾರಿ ತಪ್ಪುತ್ತಿದ್ದಾರೆ. ದಂಡ ಅಂತಹವರಿಗೆ ವಿಧಿಸಿ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿಸಿ.
ನಾವು ಕೊರೊನಾಗೆ ಹೆದರಿ ಮನೆಯಲ್ಲಿರುವಾಗ, ನಮ್ಮ ಸುರಕ್ಷತೆಗಾಗಿ ಪೋಲಿಸ್ ನವರು ತುಂಬಾ ಕಷ್ಟ ಪಡುತ್ತಿದ್ದಾರೆ. ಡಾಕ್ಟರ್ ಗಳು ಕೂಡ ನಮಗಾಗಿ ಸೇವೆ ಸಲ್ಲಿಸುತ್ತಿರುವಾಗ ನಮ್ಮ ಜೀವದ ಜಾಗೃತೆ ನಮಗಿರಲಿ. ಅವರಿಗೂ ಅವರನ್ನೇ ನಂಬಿರುವ ಕುಟುಂಬ ಇದೆ. ಅವರ ಕತ೯ವ್ಯ ಅವರು ಮಾಡುತ್ತಿರುವಾಗ ಅವರಿಗಾಗಿ ಅವರ ಸುರಕ್ಷತೆಗಾಗಿ ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ.
✍ ತನುಶ್ರೀ ಬೆಳ್ಳಾರೆ