Day: March 8, 2020

ಕುಂಬ್ರ : ಪೊಲೀಸ್ ಗಾಡಿ ನ್ಯಾನೋಗೆ ಬಡಿದು ತಲೆಕೆಳಗಾಗಿ ಬಿದ್ದಿದೆ

ಕುಂಬ್ರದ ಮಂಡ್ಯoಗಳ ಅಂಗಳ ಎಂಬಲ್ಲಿ ನ್ಯಾನೋ ಕಾರಿಗೆ ಪೊಲೀಸ್ ಇಲಾಖೆಗೆ ಸೇರಿದ ಜೀಪೊಂದು ಡಿಕ್ಕಿ ಆಗಿದೆ. ಘಟನೆಯು ಮಾಣಿ ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮಂಗಳೂರಿನಿಂದ ಮಡಿಕೇರಿಗೆ ಹೋಗುತ್ತಿದ್ದ ಈ ಪೊಲೀಸು ಜೀಪು ಅಪಘಾತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಲೆಕೆಳಗಾಗಿ ಬಿದ್ದಿದೆ. ಆಶ್ಚರ್ಯ ಅಂದರೆ ಚಿಕ್ಕ ಗಾಡಿ ನ್ಯಾನೋ ಗೆ ಹೆಚ್ಚು ಡ್ಯಾಮೇಜ್ ಆಗಿಲ್ಲ. ಘಟನೆಯಲ್ಲಿ ಪೊಲೀಸು ಜೀಪಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಪೊಲೀಸ್ ಜೀಪಿನಲ್ಲಿದ್ದವರು ಪಾರಾಗಿದ್ದಾರೆ ಎಂದು ಪ್ರತ್ಯಕ್ಷರ್ಶಿಗಳು ಹೇಳಿದ್ದಾರೆ.

ಉಪ್ಪಿನಂಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ : ಕಾರು ಚಾಲಕ ಸಾವು

ಉಪ್ಪಿನಂಗಡಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ನಡುವೆ  ಸಂಭವಿಸಿದ ರಸ್ತೆ ಅಪಘಾತದಲ್ಲಿ  ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಉಪ್ಪಿನಂಗಡಿಯಲ್ಲಿ ಇಂದು, ಭಾನುವಾರ ರಾತ್ರಿ  ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡರ ಪುತ್ರ ದಯೇಶ್ ಆಗಿದ್ದು ಆತನು ಕಾರನ್ನು ಚಲಾಯಿಸುತ್ತಿದ್ದರು. ಕಡಬ ಕಡೆಗೆ ಕೆಎಸ್ಸಾರ್ಟಿಸಿ ಬಸ್ ಹೋಗುತ್ತಿತ್ತು. ಕಡಬದಿಂದ ಉಪ್ಪಿನಂಗಡಿಗೆ ಸ್ವಿಫ್ಟ್ ಕಾರು …

ಉಪ್ಪಿನಂಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ : ಕಾರು ಚಾಲಕ ಸಾವು Read More »

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜೆಡಿಎಸ್ ಘಟಕದಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ : ಮಿಜಾರಿನ ಶ್ರೇಯ ಪುಷ್ಪರಾಜ್ ಶೆಟ್ಟಿಗೆ ಸನ್ಮಾನ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜನತಾದಳ ಸಂಯುಕ್ತದ ಕರ್ನಾಟಕ ರಾಜ್ಯ ಮಹಿಳಾ ಘಟಕವು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಅಟೋ ಡ್ರೈವರ್ಸ್, ಪೌರಕಾರ್ಮಿಕರು, ಪತ್ರಕರ್ತೆಯರು ಹೀಗೆ ಸಮಾಜದ ವಿವಿಧ ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ದೇಶ ಕಾಯುವ ಯೋಧರ ಪತ್ನಿಯರನ್ನು ಕೂಡ ಗೌರವಿಸಲಾಯಿತು. ಸನ್ಮಾನಿತರ ಪೈಕಿ ದಕ್ಷಿಣ ಕನ್ನಡದ ಮೀಜಾರಿನ , ಪ್ರತಿಭಾನ್ವಿತೆ ಪತ್ರಕರ್ತೆ ಶ್ರೇಯಾ ಪುಷ್ಪರಾಜ್ ಶೆಟ್ಟಿ ಅವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೇಯಾ …

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜೆಡಿಎಸ್ ಘಟಕದಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ : ಮಿಜಾರಿನ ಶ್ರೇಯ ಪುಷ್ಪರಾಜ್ ಶೆಟ್ಟಿಗೆ ಸನ್ಮಾನ Read More »

ಬೆಂಗಳೂರಿನಲ್ಲಿ ತ್ಯಾಜ್ಯ ರಾಶಿಯಲ್ಲಿ ಸ್ಫೋಟ | ಎಡಗಾಲು ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್

ಬೆಂಗಳೂರು, ಮಾ.8: ಬೆಂಗಳೂರಿನ ಆಡುಗೋಡಿಯ ಬಳಿ ಸಂಭವಿಸಿದ ಸ್ಫೋಟಕ್ಕೆ ವ್ಯಕ್ತಿಯೊಬ್ಬರ ಎಡಗಾಲು ತುಂಡಾದ ಘಟನೆ ರಂಗದಾಸಪ್ಪ ಬಡವಾಣೆಯಲ್ಲಿ ವರದಿಯಾಗಿದೆ. ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಹಾಸ್ಟೆಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ನರಸಿಂಹಯ್ಯ(60) ಎಂದು ಗುರುತಿಸಲಾಗಿದೆ. ಸ್ಫೋಟವು ತ್ಯಾಜ್ಯ ದ ರಾಶಿಯ ನಡುವೆ ನಡೆದಿದ್ದು ಸಹಜವಾಗಿ ಸ್ಫೋಟವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಂಗದಾಸಪ್ಪ ಬಡವಾಣೆಯಲ್ಲಿ ಸಾಲು ಸಾಲು ಗ್ರಾನೈಟ್ ಕಂಪನಿಗಳಿವೆ. ಕಂಪನಿಗಳ ತ್ರಾಜ್ಯ ವಸ್ತುಗಳು ಬೇರೆ ತ್ಯಾಜ್ಯಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಬೆಂಕಿ ಹತ್ತಿಕೊಳ್ಳುವುದು ಅಥವಾ ಸ್ಫೋಟ ಸಂಭವಿಸುತ್ತದೆ. …

ಬೆಂಗಳೂರಿನಲ್ಲಿ ತ್ಯಾಜ್ಯ ರಾಶಿಯಲ್ಲಿ ಸ್ಫೋಟ | ಎಡಗಾಲು ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್ Read More »

ಮಹಿಳಾ ಟಿ-20 ವಿಶ್ವಕಪ್ ಫೈನಲ್ | ಆಸ್ಟ್ರೇಲಿಯಾದ ವನಿತೆಯರ ಸಿಹಿ ಮುತ್ತಿಗೆ ಕಾದಿತ್ತು ವಿಶ್ವಕಪ್

ಆಸ್ಟ್ರೇಲಿಯಾ, ಮೆಲ್ಬೋರ್ನ್, ಮಾ.8 : ತೀವ್ರ ಹೋರಾಟ ನಿರೀಕ್ಷಿಸಲಾಗಿದ್ದ ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಭಾರತವನ್ನು ಬಗ್ಗು ಬಡಿದು ಆಸ್ಟ್ರೇಲಿಯಾ ಮಹಿಳಾ ತಂಡವು 5ನೇ ಬಾರಿಗೆ ವಿಶ್ವಕಪ್ ಗೆ ಸಿಹಿ ಮುತ್ತನ್ನಿಟ್ಟು ಸಂಭ್ರಮಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಭರ್ಜರಿ 184 ರನ್ ದಾಖಲಿಸಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರ್‌ಗಳಲ್ಲಿ 99 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಪಟಪಟನೆ  ಕಳೆದುಕೊಂಡು ತೀರಾ ಸಪ್ಪೆ …

ಮಹಿಳಾ ಟಿ-20 ವಿಶ್ವಕಪ್ ಫೈನಲ್ | ಆಸ್ಟ್ರೇಲಿಯಾದ ವನಿತೆಯರ ಸಿಹಿ ಮುತ್ತಿಗೆ ಕಾದಿತ್ತು ವಿಶ್ವಕಪ್ Read More »

ಬಲ್ಯ ಸ್ಪೋಟಕ ತಿಂದು ದನ ಸಾವು | ಆರೋಪಿ ಪತ್ತೆಗೆ ಮೂರು ದಿನ ಗಡುವು- ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ

ಕಡಬ: ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ಸ್ಪೋಟಕ ವಸ್ತು ಜಗಿದು ಗೋವು ಸಾವನಪ್ಪಿದ ಪ್ರಕರಣದ ಆರೋಪಿಗಳನ್ನು ಮೂರು ದಿನದೊಳಗಡೆ ಬಂದಿಸದಿದಲ್ಲಿ ಹಿಂದೂ ಬಾಂದವರು ಒಟ್ಟಾಗಿ ಕಡಬದಲ್ಲಿ ತೀವೃ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದರು. ಗೋವು ಸಾವನಪ್ಪಲು ಕಾರಣವಾದ ಸ್ಪೋಟಕವಿಟ್ಟ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಕಡಬ ಅರಕ್ಷಕರ ಮತ್ತು ಅರಣ್ಯ ಇಲಾಖೆ ವೈಪಲ್ಯ ಖಂಡಿಸಿ ಕಡಬದ ಮುಖ್ಯ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡ ಭಾನುವಾರ …

ಬಲ್ಯ ಸ್ಪೋಟಕ ತಿಂದು ದನ ಸಾವು | ಆರೋಪಿ ಪತ್ತೆಗೆ ಮೂರು ದಿನ ಗಡುವು- ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ Read More »

ಪೆರುವಾಜೆ | ತಾಳೆ ಮರದಿಂದ ಬಿದ್ದು ರಘುನಾಥ ಪೂಜಾರಿ ಮೃತ್ಯು

ಸುಳ್ಯ: ಬೆಳ್ಳಾರೆ ಪೆರುವಾಜೆ ಸಮೀಪ ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಾ.8 ರಂದು ನಡೆದಿದೆ. ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೊಲ್ಯ ವೀರಪ್ಪ ಪೂಜಾರಿ ಅವರ ಪುತ್ರ ರಘುನಾಥ ಪೂಜಾರಿ (54 ವ) ರವರು ಮೃತಪಟ್ಟವರು. ಅವರು ಇಂದು ಮೂರ್ತೆ ಮಾಡಲೆಂದು ತಾಳೆ ಮರಕ್ಕೆ ಎಂದಿನಂತೆ ಏರಿದ್ದರು. ಆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಿಟ್ಟಿದ್ದಾರೆ. ತುಂಬಾ ಎತ್ತರದಿಂದ ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ.

” ತರಕಾರಿ ಹಾಗೂ ಹಣ್ಣುಗಳ ಸ್ವಾವಲಂಬನೆ ಅತ್ಯಗತ್ಯ” | ಪುತ್ತೂರು ಹಣ್ಣು ಮೇಳ-2020 ಪ್ರಾತ್ಯಕ್ಷಿಕೆ ತಯಾರಿ ಉದ್ಘಾಟಿಸುತ್ತ ಡಾ.ಕೃಷ್ಣ ಭಟ್ ಕೊಂಕೋಡಿ

ಪುತ್ತೂರು : ಕರಾವಳಿಯಲ್ಲಿ ವಾಣಿಜ್ಯ ಬೆಳೆಗಳ ಭರಾಟೆ ಹೆಚ್ಚಾಗಿದೆ. ಇವುಗಳ ನಡುವೆ ಆಹಾರ ಬೆಳೆಗಳು ಮರೆಯಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಆಹಾರ ಬೆಳೆಗಳತ್ತ ಚಿತ್ತ ಹರಿಸಬೇಕಾದ ಅವಶ್ಯಕತೆ ಇದೆ. ಅತೀ ಮುಖ್ಯವಾಗಿ ಆರೋಗ್ಯಕ್ಕೆ ಅಗತ್ಯವಾದ ತರಕಾರಿ ಹಾಗೂ ಹಣ್ಣುಗಳಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಈ ನೆಲೆಯಲ್ಲಿ ಕೃಷಿಕರನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕಿದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ನಿನ್ನೆ, ಶನಿವಾರದಂದು ಪುತ್ತೂರಿನ ಸುದಾನ ವಸತಿಯುತ ಶಾಲಾ ವಠಾರದಲ್ಲಿ ನಡೆದ ಕರ್ನಾಟಕ …

” ತರಕಾರಿ ಹಾಗೂ ಹಣ್ಣುಗಳ ಸ್ವಾವಲಂಬನೆ ಅತ್ಯಗತ್ಯ” | ಪುತ್ತೂರು ಹಣ್ಣು ಮೇಳ-2020 ಪ್ರಾತ್ಯಕ್ಷಿಕೆ ತಯಾರಿ ಉದ್ಘಾಟಿಸುತ್ತ ಡಾ.ಕೃಷ್ಣ ಭಟ್ ಕೊಂಕೋಡಿ Read More »

ಓ ಹೆಣ್ಣೇ, ನೀನಿಲ್ಲದೆ ಹೋದರೆ ಬದುಕು ಸ್ತಬ್ದ । ಹ್ಯಾಪಿ ವುಮನ್ಸ್ ಡೇ !

ಹುಡುಗಿ, ಹೆಂಗಸು & ದ ವರ್ಲ್ಡ್ ಆಫ್ ವಿಮೆನ್ ! ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ, ಈ ಕ್ಲಿಷ್ಟ ಜಗತ್ತನ್ನು ಮ್ಯಾನೇಜ್ ಮಾಡಲು ಯಾವುದನ್ನಾದರೂ ಸೃಷ್ಟಿಸಬೇಕಿತ್ತು. ಆಗ ಆತನಿಗೆ ಹೊಳೆದ ಅದ್ಭುತ ಸೃಷ್ಟಿಯೇ ಈ ಹೆಣ್ಣು ! ಒಂದು ಕಾಲಕ್ಕೆ, ತನ್ನ ಕರೆಗಟ್ಟಿದ ಎಲೆಅಡಿಕೆಯ ಚೀಲದಿಂದ ಕೆನ್ನೆ ಮಡಿಚಿದ 2 ರೂ ಗಳನ್ನು ತನ್ನ ಬಡತನಗಳ ನಡುವೆಯೂ ಚಡ್ಡಿ ಜೋಬಿಗೆ ತುರುಕಿದ ಅಜ್ಜಿಯಾಗಿ, ಹೊತ್ತು ಹೆತ್ತು ಇಷ್ಟರಮಟ್ಟಿಗೆ ಪೋಷಿಸಿದ ಅಮ್ಮನಾಗಿ, ಅರ್ಥಮಾಡಿಕೊಳ್ಳುವ ಸೋದರಿಯಾಗಿ, ಎಲ್ಲವನ್ನೂ ತಾಳ್ಮೆಯಿಂದ ಕೇಳುವ …

ಓ ಹೆಣ್ಣೇ, ನೀನಿಲ್ಲದೆ ಹೋದರೆ ಬದುಕು ಸ್ತಬ್ದ । ಹ್ಯಾಪಿ ವುಮನ್ಸ್ ಡೇ ! Read More »

” ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದರೂ ನಾನು ಶಾಸಕ ” । ವಿದ್ಯಾರ್ಥಿ, ಪೋಷಕರಿಗೆ ಸ್ಫೂರ್ತಿ ತುಂಬಿದ ಹರೀಶ್ ಪೂಂಜಾ !

ನಿನ್ನೆ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕಡಿಮೆ ಮಾರ್ಕು ಬರಬಹುದೆಂಬ ಆತಂಕದಲ್ಲಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಆ ಘಟನೆಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಪ್ರಥಮ ಪಿ ಯು ಸಿ ಪರೀಕ್ಷೆಯಲ್ಲಿ ಫೇಲ್ ಆದವ ನಾನು. ನಿನ್ನೆಯ ವಿದ್ಯಾರ್ಥಿಯ ಆತ್ಮಹತ್ಯೆಯ ಪತ್ರಿಕಾ ವರದಿಯನ್ನು ಓದಿದ ಮೇಲೆ ಈ ಮಾತನ್ನು ನಾನು ಅಗತ್ಯವಾಗಿ ಹೇಳಲೇಬೇಕಾಗಿದೆ …

” ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದರೂ ನಾನು ಶಾಸಕ ” । ವಿದ್ಯಾರ್ಥಿ, ಪೋಷಕರಿಗೆ ಸ್ಫೂರ್ತಿ ತುಂಬಿದ ಹರೀಶ್ ಪೂಂಜಾ ! Read More »

error: Content is protected !!
Scroll to Top