ಇವತ್ತಿನ ಅಶಾಂತಿಯ ಹಿಂದೆ RSS ಮತ್ತುVHP ಇವೆ | ಕುಮಾರಸ್ವಾಮಿ ಗುರುತರ ಆರೋಪ

Share the Article

ಶಾಂತಿಯನ್ನು ಕದಡುವ ಕೆಲಸವನ್ನು RSS ಮತ್ತುVHP ಗಳು ಮಾಡುತ್ತಿವೆ. ಈ ದೇಶ RSS ಗೆ ಸೇರಿದ್ದಲ್ಲ. ಬಿಜೆಪಿಯ ನೆರಳಿನಲ್ಲಿ ಇವು ಕಾರ್ಯಾಚರಿಸುತ್ತಿವೆ ಎಂದು ಗುರುತರ ಆರೋಪವನ್ನು ಸಂಘ ಪರಿವಾರ ಮತ್ತುಬಿಜೆಪಿಯ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿದ್ದಾರೆ.
ಅಲ್ಲದೆ ಮಂಗಳೂರಿನಲ್ಲಿ ನಿನ್ನೆ ನಡೆದಿರುವುದು ಬಾಂಬಿನ ಅಣಕು ಪ್ರದರ್ಶನ. ಕಬ್ಬಿಣದ ಪೆಟ್ಟಿಗೆಯಲ್ಲಿ ಇದ್ದದ್ದುಬಾಂಬ್ ಅಲ್ಲ, ಅದು ಪಟಾಕಿ ಎಂದಿದ್ದಾರೆ.
ಅಲ್ಲದೆ, ಮಂಗಳೂರಿನ ಎಸ್ ಪಿ ಹರ್ಷ ಅವರಿಗೆ ” ಇವತ್ತು ಏನೂ ಬಾಂಬ್ ಇಟ್ಟಿಲ್ಲವಾ ?” ಎಂದು ಪೊಲೀಸ್ ಇಲಾಖೆಯನ್ನು ಕಿಚಾಯಿಸಿದ್ದಾರೆ. ಅವರ ಮಾತಿಗೆ ಜನರಿಂದ ಮತ್ತು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಬಂದುದನ್ನು ಗಮನಿಸಿ, ನಾನು ತಮಾಷೆಗೆ ಹೇಳಿದ್ದು ಎಂದು ಜಾರಿಕೊಂಡಿದ್ದಾರೆ ಕುಮಾರಸ್ವಾಮಿ.
ಅಲ್ಲದೆ, ಹತ್ತು ಕೆಜಿ ಬಾಂಬ್ ಇದೆ ಎಂದು ವರದಿ ಮಾಡುತ್ತೀರಿ ಎಂದು ಕುಮಾರಸ್ವಾಮಿ ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದಾರೆ.

Leave A Reply

Your email address will not be published.