ಹಳಸಲು ಅನ್ನಕ್ಕೆ ಕಾದು ಕುಳಿತ ಜೆಡಿಎಸ್
ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅನ್ನುವುದು ಒಂದು ಹಳೆಯ ಗಾದೆ ಮಾತು. ಇದೆ ಅರ್ಥ ಬರುವ ಇನ್ನೂ ಮಾತು ಇಂಗ್ಲಿಷಿನಲ್ಲಿ ಬಳಕೆಯಲ್ಲಿದೆ. ಎಲ್ಲಿ ಹೇಲು ಇರುತ್ತದೋ, ಅಲ್ಲೊಂದು ಇಂಟರ್ನ್ಯಾಷನಲ್ ನಾಯಿ ಕಾದು ಕೂತಿರುತ್ತದೆ ಎಂದು.
ಈ ಮಾತುಗಳು ಇವತ್ತು ಜೆಡಿಎಸ್ ಪಕ್ಷದ ನಡವಳಿಕೆಗಳನ್ನು ನೋಡಿದಾಗ ನೆನಪಾಗುತ್ತಿದೆ. ಇವತ್ತು ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಸೀಟು ಬಿಟ್ಟು ಕೆಳಗಿಳಿದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ 17 ಮಂದಿ ಶಾಶಕರ ರಾಜೀನಾಮೆಯಿಂದಾಗಿ. ಸಹಜವಾಗಿ, ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ನಿರೀಕ್ಷೆಯಂತೆಯೇ ಬಿಜೆಪಿಯ ಟಿಕೆಟ್ ಪಡೆದು ಅತೃಪ್ತರು ಸ್ಪರ್ಧಿತ್ತಿದ್ದಾರೆ. ಈ ಎಲ್ಲ ಶಾಶಕರೂ ಹಿಂದೆ ತಮ್ಮತಮ್ಮ ಕ್ಷೇತ್ರದಲ್ಲಿ ಬಿಜೆಪಿಯ ಮತ್ತು ಕೆಲವು ಕ್ಷೇತ್ರಗಳಲ್ಲಿ ಇತರರನ್ನು ಸೋಲಿಸಿ ಗೆದ್ದವರು. ಆದರೆ ಬದಲಾದ ಪರಿಸ್ಥಿತಿಯಲ್ಲಿ, ಆಗ ಗೆದ್ದವರು, ಈಗ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ. ಆದ್ರೆ ಅದು ಬಿಜೆಪಿ ಪಕ್ಷದಲ್ಲಿ. ಹಾಗಾಗಿ, ಕಳೆದ ಸಲ ಸೋತವರಿಂದ ತೀವ್ರ ವಿರೋಧ ಬರುವುದಂತೂ ನಿಜ. ಅದನ್ನೇ ಬಂಡವಾಳ ಮಾಡಿಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಕಾಯುತ್ತಿವೆ. ಇಂತಹ ಅತೃಪ್ತರನ್ನು ಸೆಳೆದು, ತಮ್ಮ ಪಕ್ಷದ ಟಿಕೆಟ್ ನೀಡಿ, ಒಂದಷ್ಟು ಕ್ಷೇತ್ರದಲ್ಲಿ ಗದ್ದಲವೆಬ್ಬಿಸುವುದು ಇವರ ಪ್ಲಾನ್.
ಈಗ ಜೆಡಿಎಸ್ ಪಕ್ಷದ ಕತೆಯಂತೂ ತೀರಾ ಅಧ್ವಾನವಾಗಿದೆ. ಅದಕ್ಕೆ, ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯೇ ಇಲ್ಲದ ಪರಿಸ್ಥಿತಿ.ಹಾಗಾಗಿ, ಬಿಜೆಪಿಯ ಅಭ್ಯರ್ಥಿಗಳನ್ನೇ ನೆಚ್ಚಿಕೊಂಡು ಅದು ಬಕಪಕ್ಷಿಯಂತೆ ಕೂತಿದೆ. ಆದ್ರೆ, ಗೆಲ್ಲುವ ಅಶ್ವಮೇಧದಲ್ಲಿ ಯಾರಿಗೂ ಸಿಗದೆ ನಾಗಾಲೋಟದ ಕುದುರೆ ಬಿಜೆಪಿಯನ್ನು ಬಿಟ್ಟು ಹೋದರೆ ತಮಗೆ ಇವಾಟಿಇಗೆ ಅಲ್ಲ, ಯಾವತ್ತಿಗೂ ಏನೂ ಕೂಡ ಗಿಟ್ಟುವುದಿಲ್ಲ ಅಂತ ಅವರಿಗೆಲ್ಲ ಗೊತ್ತಿದೆ. ಅದೂ ಅಪ್ಪ ಮಕ್ಕಳ ಪಕ್ಷದಲ್ಲಿ, ಇವರೇನಾದರೂ ಹೋದರೆ, ಇವರ, ಓಡಲಾರದ, ಅಶ್ವಮೇಧದ ಕುದುರೆಯಾಗೇಬಿಡುತ್ತಾರೆಂದು ಎಲ್ಲರಿಗೂ ಗೊತ್ತಿದೆ. ಆದರೆ, ತಮ್ಮ ಕ್ಷೇತ್ರವನ್ನು , 17 ಜನ ಅತೃಪ್ತ ಶಾಶಕರಿಗೆ ಬಿಟ್ಟುಬಿಡುವಾಗ, ಸ್ವಲ್ಪ ಹಲ್ಲಾಗುಲ್ಲಾ ಮಾಡಿ, ದೂಳೆಬ್ಬಿಸಿ, ಏನಾದ್ರೂ ಒಂದು ಪದವಿ, ಒಂದು ಭರವಸೆ, ಏನು ಇಲ್ಲದೆ ಹೋದರೆ ಒಂದಷ್ಟು ಕ್ಷೇತ್ರಾಭಿವೃದ್ದಿಗೆ ಫಂಡ್ ಇತ್ಯಾದಿಗಳನ್ನು ಗೋರಿಕೊಳ್ಳುವ ಪ್ಲಾನಷ್ಟೇ ಬಿಜೆಪಿಯ ಮಂದಿ ಮಾಡುತ್ತಿರುವುದು. ಬಿಜೆಪಿಯ ಎದುರು ಬೇರೆ ಪಕ್ಷಕ್ಕೆ ಹಾರಿ ಹೋದರೆ, ತಮ್ಮ ರಾಜಕೀಯ ಜೀವನ ಉಪ್ಪು ಹಾಕದ ಚಿತ್ರಾನ್ನ ಆಗುತ್ತೆ ಅಂತ ಅವರಿಗೆ ಚೆನ್ನಾಗಿ ಗೊತ್ತು.
ಇವತ್ತಿಗೆ ಉಪಸಮರದ ಚುನಾವಣಾ ನಾಮಪತ್ರ ಸಲ್ಲಿಸಲು 2 ದಿನ ಅಷ್ಟೇ ಬಾಕಿ ಇರೋದು. ಅಥಣಿ, ಗೋಕಾಕ, ಕಾಗವಾಡ ಮತ್ತು ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಗೇ ಇಲ್ಲ. ಹೊಸಕೋಟೆಯಲ್ಲಿ, ತಮ್ಮ ಆಜನ್ಮ ಶತ್ರುವಾದ, ಬಚ್ಚೇಗೌಡರ ಮಗನನ್ನು ಬೆಂಬಲಿಸಲು ಜೆಡಿಎಸ್ ಹೊರಟಿದೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿಗಳು
ಚೈತ್ರಗೌಡ ಎ (ಯಲ್ಲಾಪುರ)
ಉಜ್ನಪ್ಪ ಜಟಪ್ಪ ಕೋಡಿಹಳ್ಳಿ (ಹಿರೆಕೆರೂರು )
ಮಲ್ಲಿಕಾರ್ಜುನ್ ಹಲಗೇರಿ (ರಾಣೆಬೆನ್ನೂರ್)
ಎನ್.ಎಂ.ನಬಿ (ವಿಜಯನಗರ)
ಕೆ.ಪಿ.ಬಚ್ಚೆಗೌಡ (ಚಿಕ್ಕಬಳ್ಳಾಪುರ )
ಸಿ ಕೃಷ್ಣ ಮೂರ್ತಿ (ಕೆ.ಆರ್.ಪುರಂ)
ಟಿ.ಎನ್.ಜವರಾಯಿ ಗೌಡ (ಯಶವಂತಪುರ )
ತನ್ವೀರ್ ಅಹ್ಮದ್ (ಶಿವಾಜಿನಗರ)
ದೇವರಾಜ್ ಬಿ.ಎಲ್ (ಕೆ.ಆರ್ ಪೇಟೆ )
ಸೋಮಶೇಖರ್ (ಹುಣುಸೂರು)
ಇಲ್ಲಿ ಯಾವುದೇ ಗೆಲ್ಲಬಲ್ಲ ಮುಖ ಕಾಣುತ್ತಿಲ್ಲ. ಕುಮಾರಸ್ವಾಮಿಯವರಂತೂ ತಮ್ಮ ಉದ್ದೇಶ ಗೆಲ್ಲಲಲ್ಲ, ಅನರ್ಹರನ್ನು ಸೋಲಿಸಲು ಅಂದು ಬಿಟ್ಟಿದ್ದಾರೆ. ಮುಖ್ಯಮಂತ್ರಿ ಪದವಿ ಹೋದದ್ದು ಅನರ್ಹ ಶಾಶಕರಿಂದ ಹೋದದ್ದು ನಿಜವಾದರೂ, ಈಗ ಸೋಲಿಸುವುದರ ಜತೆಗೆ, ಗೆಲ್ಲುವ ಅಭ್ಯರ್ಥಿಯನ್ನು ತಮ್ಮ ಪಕ್ಷದೊಳಗೆ ಹುಡುಕುವುದು, ಮತ್ತು ಮುಖ್ಯವಾಗಿ, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರಯ್ತತ್ನಿಸುವುದು.
ದೇವೇಗೌಡರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಬೇರೊಬ್ಬ ವಿಕೆಟ್ಟು ಕೆಡವುದರಲ್ಲೇ ಖ್ಯಾತಿ ಕುಖ್ಯಾತಿ ಹೊಂದಿರುವವರು. ದೂರಗಾಮಿ ರಾಜಕಾರಣದಲ್ಲಿ ಕೆಡವುವ ರಾಜಕಾರಣ ಜನರ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಒಟ್ಟಾರೆ ಕಾಮನ್ ಮ್ಯಾನ್ ಪಾಸಿಟಿವ್ ಮನಸ್ಸತ್ವ ಉಳ್ಳವನು. ಜೆಡಿಎಸ್ ಈ ದಿನ ಅದರ ಫಲವನ್ನು ಉಣ್ಣುತ್ತಿದೆ. ಅದರ ನಾಯಕರು ಮತ್ತು ಮತದಾರರು ಅದರಿಂದ ದೂರ ಹೋಗುತ್ತಿದ್ದಾರೆ.