ವಿಕ್ಷಿಪ್ತ ಮನದ ಮಿಸ್ಟೀರಿಯಸ್ ವೆಬ್ ಸೈಟುಗಳು
ರೇಟ್ ಮೈ ಪೂಪ್ :
ರೇಟ್ ಮೈ ಪೂಪ್ ರೇಟ್ ಮೈ ಪೂಪ್ ಅನ್ನುವುದೊಂದು ವೆಬ್ ಸೈಟ್. ಪೂಪ್ ಅಂದರೆ ಕನ್ನಡದಲ್ಲಿ ಮಲ/ಹೇಲು ಅಂದರ್ಥ. ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಬಳಸುವ ಪದ ‘ಶಿಟ್”! ಏನಪ್ಪಾ ಇದರಲ್ಲಿದೆ ಎಂದು ಓಪನ್ ಮಾಡಿ ನೋಡಿದರೆ ಅಲ್ಲೇನಿದೆ? ಇರುವುದು ಡೊನಾಲ್ಡ್ ಟ್ರಂಪ್ ದೊಡ್ಡ ಫೋಟೋ!!! ಕೆಳಗೆ ಕಮೆಂಟ್ ಬೇರೆ.’ ಬಿಗ್ಗೆಸ್ಟ್ ಪೀಸ್ ಆಫ್ ಶಿಟ್’ ಎಂದು ! ಈ ವೆಬ್ ಸೈಟಿಗೆ ಹತ್ತಾರು ಸ್ಪಾನ್ಸರ್ ಗಳಿದ್ದಾರೆ. ಅವರು ಕೂಡ ಈ ವೆಬ್ ಸೈಟು ನಡೆಸುವಂತಹ ಜನರಂತಹ ಮನಸ್ಥಿತಿಯವರು. ಅವರಷ್ಟೇ ವಿಕ್ಷಿಪ್ತರು. ನೀವು ಕೂಡ ಈ ವೆಬ್ ಸಿಟಿನೊಳಗೆ ಹೋಗಿ ನಿಮ್ಮ ‘ಪೂ’ (ಮಲದ) ಚಿತ್ರ ತೆಗೆದು ಅಪ್ಲೋಡ್ ಮಾಡಬಹುದು. ಅದಕ್ಕೆ ವೆಬ್ ಸೈಟ್ ನ ವೀಕ್ಷಕರು ರೇಟ್ ಕೂಡ ಮಾಡುತ್ತಾರೆ. ನಿಮ್ಮ ಮಲವು ಅದೆಷ್ಟು ಸೆಕ್ಸಿ ಮತ್ತು ಅದೆಷ್ಟು ಲವಲವಿಕೆಯಿಂದ ಇದೆ ಎಂದು ಪ್ರಕಟಿಸುತ್ತಾರೆ. ಯಾರಿಗೆ ಗೊತ್ತು ಯಾವ ಹುತ್ತದಲ್ಲಿ ಎಂಥ ಅದ್ಭುತ ‘ಪೂ’ ಇರಬಹುದೆಂದು. ಒಮ್ಮೆ ಟ್ರೈ ಮಾಡಿ ನೋಡಿ. ಬೆಸ್ಟ್ ವಿಷಸ್. All the best!!
‘ಟೈಮ್ ಕ್ಯೂಬ್ ‘:
ಟೈಮ್ ಕ್ಯೂಬ್ ‘ ಅನ್ನು 1997 ರಲ್ಲಿ ಓಟಿಸ್ ಯೂಜಿನ್ ಅಲಿಯಾಸ್ ಜೀನ್ ರೇ ಪ್ರಾರಂಭಿಸಿದನು. ಆತ ತನ್ನನ್ನು ತಾನು ಅಪಾರ ಬುದ್ದಿವಂತ ಅಂತ ಅಂದುಕೊಂಡಿದ್ದಾನೆ. ತನ್ನನ್ನು ‘ ದಿ ವೈಸೆಸ್ಟ್ ಮ್ಯಾನ್’ ಎಂದು ಕರೆದುಕೊಂಡಿದ್ದಾನೆ. ಹಾಗೆ ಕರೆದುಕೊಂಡದ್ದಷ್ಟೇ ಅಲ್ಲ, ಹಾಗಂತ ಅಂದುಕೊಂಡಿದ್ದಾನೆ. ಆತನ ಸಂಶೋಧನೆಯ ಬಗ್ಗೆ ಮುಂದೆ ಓದಿದಾಗ, ನಿಮಗೆ ಹಾಗಂತ ಅನ್ನಿಸಲೂ ಬಹುದು. ಯಾರಿಗೆ ಗೊತ್ತು ?! ಆತನ ಪ್ರಕಾರ ನಾಲ್ಕುದಿನಗಳು ಸೇರಿ ಒಂದು ದಿನ ಆಗುತ್ತದೆ. ಅಂದರೆ ನಾವು ನಮ್ಮನಾಲ್ಕು ದಿನಗಳು, ಅಂದರೆ ಸೋಮವಾರದಿಂದ ಗುರುವಾರದವರೆಗೆ, ನಮ್ಮ ಪ್ರಕಾರ ನಾಲ್ಕು ದಿನಗಳು. ಆದರೆ ಅದು ತಪ್ಪು. ಅದು ಕೇವಲ ಒಂದೇ ದಿನ ! ಆದರೆ ಎಲ್ಲರಿಗೂ ಇಲ್ಲಿಯತನಕ ಸುಳ್ಳನ್ನೇ ಹೇಳಿಕೊಂಡು ಬಂದಿರುತ್ತಾರೆ. ಇಲ್ಲಿ ಯಾರೂ ಸತ್ಯವನ್ನು ಹೇಳುತ್ತಿಲ್ಲ. ಸತ್ಯವನ್ನು ಹೇಳಿಕೊಡುತ್ತಿಲ್ಲ. ಇದು ಪೂರ್ತಿ ಸುಳ್ಳಿನ ಪ್ರಪಂಚ. ತನ್ನನ್ನು ತಾನು ಅಪಾರ ಜ್ಞಾನವಂತನೆಂದು ನಂಬಿರುವ ಆತ, ಎಲ್ಲರೂ ಸುಳ್ಳನ್ನೇ ಹರಡುತ್ತಿದ್ದಾರೆ ಎಂದು ಹೇಳುತ್ತಾನೆ. ಆತನ ಥಿಯರಿಯ ಕೆಳಗಿನ ವಾಕ್ಯಗಳನ್ನು ಓದಿರಿ. ಜೀನ್ ರೇ ನ ಥಿಯರಿ ಅರ್ಥ್ ಹ್ಯಾಸ್ ಫೋರ್ ಕಾರ್ನರ್ಸ್ ( ಭೂಮಿಗೆ ನಾಲ್ಕು ಮೂಲೆಗಳಿವೆ)
Simultaneously ಫೋರ್ ಕಾರ್ನರ್ಸ್ ( ಏಕಕಾಲದಲ್ಲಿ ನಾಲ್ಕು ಮೂಲೆಗಳು )
ಟೈಮ್ ಕ್ಯೂಬ್ ಇನ್ ಓನ್ಲಿ ೨೪ ಗಂಟೆ ರೊಟೇಷನ್ ( ಮುಂದೆ ಅನುವಾದ ನನ್ನ ಸೀಮಿತ ಜ್ಞಾನಕ್ಕೆಅಸಾಧ್ಯ )
4 ಕಾರ್ನರ್ಸ್ ಡೇಸ್ , ಕ್ಯೂಬ್ಸ್ 4 ಕ್ವಾಡ್ ಅರ್ಥ್- ನಂಬರ್ 1 ಡೇ ಗಾಡ್. (ನಂಗೆ ಅರ್ಥ ಆಯಿತು, ನಿಮಗರ್ಥ ಆಗಲಿಲ್ಲ ಅಂತ. ಪ್ರಾಬಬ್ಲಿ ಯು ಹ್ಯಾವ್ ಗಾನ್ ಮ್ಯಾಡ್ !
ಇದು ಪ್ರಪಂಚದ ‘ವೈಸೆಸ್ಟ್ ಮ್ಯಾನ್ ‘ ಜೀನ್ ರೇಗೆ ಮಾತ್ರ ಅರ್ಥ ಆಗತ್ತೆ.
ಆದ್ರೆ ನಮ್ಮಕನ್ನಡ ಮಂದಿ ತಕ್ಕ ಮಟ್ಟಿಗೆ ಬುದ್ಧಿವಂತರು. ಅವರು ಕೇಳ್ತಿದ್ದಾರೆ : “ವಯಸ್ಸೆಷ್ಟು(ವೈಸೆಸ್ಟ್) ಆತನಿಗೆ ? “ದುರದೃಷ್ಟವಶಾತ್, ಆತನ ವಯಸ್ಸು ಅಲ್ಲೇ ನಿಂತುಬಿಟ್ಟಿದೆ. ಆತ 2015 ರಲ್ಲಿ ತೀರಿಕೊಂಡಿದ್ದಾನೆ, ತನ್ನ 85 ರ ವಯಸ್ಸಿನಲ್ಲಿ.
ಡೆತ್ ಡೇಟ್ :
ಈ ವೆಬ್ ಸೈಟು ನಿಮಗೆ ನಿಮ್ಮ ಸಾಯುವ ದಿನಾಂಕವನ್ನು ಲೆಕ್ಕ ಹಾಕಿ ಕೊಡುತ್ತದೆ. ಅಲ್ಲಿ ಹೋಗಿ ಫಾರಂ ಫಿಲ್ ಮಾಡಿ calculate ಅಂತ ಕೊಟ್ಟರೆ ಸಾಕು. ನಿಮ್ಮ ಕಣ್ಣ ಮುಂದೇ ಸಾವು ಬಂದು ಕುಣಿಯಲು ಆರಂಭಿಸುತ್ತದೆ. ಗಡಿಯಾರದ ಮುಳ್ಳಿನ ಟಿಕ್ ಟಿಕ್ ಟಿಕ್ ಸದ್ದು ನಿಮ್ಮ ಮರಣದ ಕ್ಷಣಗಣನೆ ಮಾಡುತ್ತವೆ. ಈ ವೆಬ್ ಸೈಟು ನಿಮಗೆ ನಿಮ್ಮ ಸಾಯುವ ದಿನಾಂಕವನ್ನು ಲೆಕ್ಕ ಹಾಕಿ ಕೊಡುತ್ತದೆ. ಅಲ್ಲಿ ಹೋಗಿ ಫಾರಂ ಫಿಲ್ ಮಾಡಿ calculate ಅಂತ ಕೊಟ್ಟರೆ ಸಾಕು. ನಿಮ್ಮ ಕಣ್ಣ ಮುಂದೇ ಸಾವು ಬಂದು ಕುಣಿಯಲು ಆರಂಭಿಸುತ್ತದೆ. ಗಡಿಯಾರದ ಮುಳ್ಳಿನ ಟಿಕ್ ಟಿಕ್ ಟಿಕ್ ಸದ್ದು ನಿಮ್ಮ ಮರಣದ ಕ್ಷಣಗಣನೆ ಮಾಡುತ್ತವೆ. ಈ ವೆಬ್ ಸೈಟ್ ಒಳಗೊಂದು ಹೆಲ್ಪ್ ಸೆಂಟರಿದೆ. ಅಲ್ಲಿರುವ FAQ ನ ಪ್ರಶ್ನೋತ್ತರ ಓದಬೇಕು ನೀವು. ಸೊ ಕ್ರೇಜಿ.!! ಒಂದು ವೇಳೆ ವೆಬ್ ಸೈಟ್ ಹೇಳಿದ ಪ್ರಕಾರ, ಹೇಳಿದ ದಿನಾಂಕದ ಒಳಗೆ ಸಾಯದೆ ಉಳಿದರೆ ಆತ ಕೇಳುತ್ತಾನೆ. “ನಾನಿನ್ನೂ ಸತ್ತಿಲ್ಲ ಯಾಕೆ?” ಅದಕ್ಕೆ ಉತ್ತರ ವೆಬ್ ಸೈಟ್ ಉತ್ತರಿಸುತ್ತದೆ : “ಬಹುಶ ಸಾವು ಜಾಸ್ತಿ ಹೊತ್ತು ಮಲಗಿ ನಿದ್ರಿಸುತ್ತಿದ್ದಿರಬೇಕು” “ಡೋಂಟ್ ವರಿ. ಹೆದರಿಕೊಳ್ಳಬೇಡಿ. ಹೇಗಿದ್ದರೂ ಸಾವು ಬರುತ್ತದೆ. ಸ್ವಲ್ಪ ಕಾಯಿರಿ ಎಂದು” ಎಂದು ಸಮಾಧಾನ ಮಾಡುತ್ತದೆ! ”ಸತ್ತು ಹೋದದ್ದು ನಮಗೆ ಹೇಗೆ ಗೊತ್ತಾಗುತ್ತದೆ” ಎನ್ನುವುದೊಂದು ಇನ್ನೊಬ್ಬ ವ್ಯಕ್ತಿಯ ಡೌಟ್ ಫುಲ್ ಕ್ವೆಶ್ಚನ್. “ಸತ್ತು ಹೋದದ್ದನ್ನು ತಿಳಿಯಲು ಹಲವು ವಿಧಾನಗಳಿವೆ. ನಾವದನ್ನು ನಿಮಗೆ ತಿಳಿಸಿ ಹೇಳಿಕೊಡಲಿಕ್ಕಾಗುವುದಿಲ್ಲ. ನಿಮಗೆ ನೀವೇ ಸತ್ತು ಹೋದದ್ದನ್ನು ಕನ್ಫರ್ಮ್ ಮಾಡಿಕೊಳ್ಳಬೇಕು” ವೆಬ್ ಸೈಟ್ ಉತ್ತರಿಸುತ್ತದೆ. ವಿಚಿತ್ರವೆಂದರೆ ಈ ವೆಬ್ ಸೈಟ್ ನಲ್ಲೊಂದು, ಬೆಂಗಳೂರಿನ ಅಪಾರ್ಟ್ ಮೆಂಟಿನ ಜಾಹೀರಾತು ಬರುತ್ತಿತ್ತು. World is full of crazy people!
ವರ್ಲ್ಡ್ ಬರ್ತ್ ಅಂಡ್ ಡೆಥ್ಸ್
ಈ ಪ್ರಪ೦ಚದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಹುಟ್ಟುತ್ತಿದ್ದಾರೆ, ಸಾವಿರಾರು ಜನರು ಸಾಯುತ್ತಿದ್ದಾರೆ. ಈ ಕ್ಷಣಕ್ಕೆ ಅದೆಷ್ಟು ಜನ ಹುಟ್ಟುತ್ತಿದ್ದಾರೆ, ಅದೆಷ್ಟು ಜನರು ಪಟ ಪಟ ಅಂತ ಎಗರಿ ಬೀಳುತ್ತಿದ್ದಾರೆ ಅಂತ ಅಂಕಿ ಅಂಶಗಳ ಸಮೇತ ತೋರಿಸುತ್ತಾ ಹೋಗುತ್ತದೆ ಈ ವೆಬ್ ಸೈಟು.
ಸುದರ್ಶನ್ ಬಿ. ಪ್ರವೀಣ್, ಬೆಳಾಲು