‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ಹಿಂದೆ 2004 ರಲ್ಲಿ ವೀರ ಕನ್ನಡಿಗ ಚಿತ್ರ ಬಂದಿತ್ತು, ಪವರ್ ಸ್ಟಾರ್ ಪುನೀತ್ ರಾಜಕುಮಾರಿದ್ದು. ಈಗ ಸ್ಟಾರ್ ಕನ್ನಡಿಗ ಬಂದಿದೆ. ಅದರಲ್ಲಿ ಯಾವುದೇ ಸ್ಟಾರ್ ಇರುವಂತೆ ಗೋಚರಿಸುತ್ತಿಲ್ಲ. ಚಿತ್ರ ಇದೇ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತೆರೆಯ ಮೇಲೆ ಸ್ಟಾರ್ ಗಿರಿ ತೋರಲಿದೆ. ಚಿತ್ರತಂಡವೇ ಹೇಳಿದಂತೆ ಇದು ‘ಆಟೋ ಮತ್ತು ಕಾರು ಚಾಲಕರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ’ !
” ಹೆಮ್ಮೆಯಿಂದ ಎದೆ ತಟ್ಕೊಂಡು ಹೇಳೋಣು ಕನ್ನಡಿಗ, ಹೇಳೋಕೆ ನಾಚಿಕೆ ಪಡೋನು ಗಾಂಡು ನನ್ಮಗ” ಅದರ ಘರ್ಜನೆ!
”ಸ್ಟಾರ್ ಕನ್ನಡಿಗ ನವೆಂಬರ್ ಒಂದು ; ಕನ್ನಡಿಗರೆಲ್ಲ ನಂಬರ್ ಒಂದು” ಇನ್ನೊಂದು ಡೈಲಾಗ್ !
ಕೊನೆಯದಾಗಿ ಕೇಳಿ. ” ಬೋಲೋ ಕನ್ನಡಿಗಾ ಕೀ ಜೈ!! ”
ಚಿತ್ರ ಹೇಗಿರಬಹುದೆಂದು ಊಹಿಸಿ. ಬೇರೆ ಡೀಟೇಲ್ಸ್ ಬೇಕಾಗಿಲ್ಲ ಅಂದ್ಕೋತೇನೆ!!

ಸುದರ್ಶನ್ ಬಿ.ಪ್ರವೀಣ್


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: