ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’!

ಮತ್ತೆ ಸಾಲು ಸಾಲು ಕನ್ನಡ ಚಿತ್ರಗಳು ತೆರೆ ಮೇಲೆ ಬರಲಿವೆ.
ಅಂತದ್ದರಲ್ಲಿ ‘ಕನ್ನಡ್ ಗೊತ್ತಿಲ್ಲ” ಒಂದು ಚಿತ್ರ. ಶ್ರೀ ರಾಮರತ್ನ ಬ್ಯಾನರ್ ನ ಅಡಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ನಿರ್ಮಾಪಕರು ಕುಮಾರ ಕಂಠೀರವ ಅವರು. ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರರವರಿಗೆ ಇದು ಚೊಚ್ಚಲ ಚಿತ್ರ. ಸುಧಾರಾಣಿಯವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರದ ನಾಯಕಿ ಕನ್ನಡ ಗೊತ್ತಿರುವ ಹರಿಪ್ರಿಯಾ ಅವರು.ಉಳಿದಂತೆ ನಿರ್ದೇಶಕ ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ನಟ ಪವನ್ ಅವರು ನಟಿಸುತ್ತಿದ್ದಾರೆ. ನವೆಂಬರ್ 15 ಕ್ಕೆ ತೆರೆಯ ಮೇಲೆ ಬರಲಿದೆ.
ಇಷ್ಟಕ್ಕೂ ವಿಷಯ ಅದಲ್ಲ. ‘ಕನ್ನಡ್ ಗೊತ್ತಿಲ್ಲ’ ನಿಜಕ್ಕೂ ಒಳ್ಳೆಯ ಫಿಲಂ ಟೈಟಲ್ !! ಈ ಟೈಟಲ್ ತುಂಬಾ ಸಾಂಧರ್ಬಿಕ ಕೂಡಾ. ನಮ್ಮಎಷ್ಟು ಜನ ಹೀರೋಯಿನ್ ಗಳಿಗೆ ಕನ್ನಡ ಬರತ್ತೆ ಹೇಳಿ. ಕನ್ನಡದವರೇ, ಅತ್ತ ತಮಿಳು- ತೆಲುಗು ಚಿತ್ರಗಳಲ್ಲಿ ಒಂದೆರಡು ಚಿತ್ರ ಮಾಡಿ, ದಪ್ಪನೆಯ ಚೆಕ್ ಇಸ್ಕೊಂಡ ಮೇಲೆ ಅವರಿಗೆ ಈಗಾಗಲೇ ಗೊತ್ತಿರುವ ಅರೆಬರೆ ಕಾನ್ವೆಂಟ್ ಕನ್ನಡ್ ಮರೆತು ಹೋಗಿ ಬಾಯಲ್ಲಿ ಬರಬರನೆ ಇಂಗ್ಲಿಷ್ ಉದುರುತ್ತದೆ. ಇತ್ತೀಚೆಗಷ್ಟೇ ‘ಕನ್ನಡ್-ತಿ’ ರಶ್ಮಿಕಾ ಮಂದಣ್ಣ ‘ನಂಗೆ ಕನ್ನಡ್ ಸರಿಯಾಗಿ ಬರಲ್ಲ’ ಎಂದು ಹೇಳಿ, ಆಮೇಲೆ ನಮ್ಮಹೈದರ ಕೈಲಿ,ನಮ್ಮಪಕ್ಕಾ ಲೋಕಲ್ ಕನ್ನಡದಲ್ಲಿ ಸರಿಯಾಗಿ ಉಗಿಸಿಕೊಂಡಂದ್ದು !

‘ಈ ಚಿತ್ರ ತಂಡದ ಎಲ್ಲರಿಗೂ ಕನ್ನಡ ಬರುತ್ತೆ. ಒಂದುವೇಳೆ ಮುಂದೆ ಅವರೆಲ್ಲ ಪರಭಾಷೆಯಲ್ಲಿ ಸಕ್ಸಸ್ ಆಗಿ,ನಂತರ ಒಂದು ವೇಳೆ ‘ಖನ್ನಡ್ ಬರಲ್ಲ’ ಅಂದ್ರೂನೂ ಯಾರು ಕೂಡ ಕೆಮ್ಮಂಗಿಲ್ಲ! ಕಾರಣ ಅವರು ಆಲ್ರೆಡಿ ಹೇಳ್ಕೊಂಡ್ ಬಂದಿದ್ದಾರೆ :” ಕನ್ನಡ್ ಗೊತ್ತಿಲ್ಲ ! ‘

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: