Home ಸುದ್ದಿ Puttur: ದ್ವೇಷ ಭಾಷಣ ‘ಕಲ್ಲಡ್ಕ ಪ್ರಭಾಕರ ಭಟ್’ ವಿರುದ್ದ ಸಂಪ್ಯ ಠಾಣೆಗೆ ದೂರು

Puttur: ದ್ವೇಷ ಭಾಷಣ ‘ಕಲ್ಲಡ್ಕ ಪ್ರಭಾಕರ ಭಟ್’ ವಿರುದ್ದ ಸಂಪ್ಯ ಠಾಣೆಗೆ ದೂರು

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು (Puttur) ತಾಲೂಕಿನ ಉಪ್ಪಳಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಪ್ರಚೋದನಕಾರಿ, ಅವಮಾನಕಾರಿಯಾಗಿ ಭಾಷಣದ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡುವಂತೆ ಮಾತಾಡಿದ್ದಾರೆ ಎಂದು ಆರೋಪಿಸಿ ವಿರುದ್ದ ಹಾಗೂ ಮಹಿಳೆಯರನ್ನ ಕೀಳಾಗಿ ಕಂಡು ಅವಮಾನಿಸಿದ ಭಾಷಣ ಮಾಡಿದ ವಿರುದ್ದ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರೊಂದಿಗೆ ಜೆ.ಎಂ.ಎಸ್. ಜಿಲ್ಲಾಧ್ಯಕ್ಷೆ ಕಿರಣಪ್ರಭಾ, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ, ಜಿಲ್ಲಾ ಮುಖಂಡರುಗಳಾದ ಯೋಗಿತ ಅಸುಂತರ ಅವರು ಇದ್ದರು. ಸಂಪ್ಯ ಪೋಲೀಸರು ದೂರನ್ನು ಸ್ವೀಕರಿಸಿದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.