Home ಸಾಮಾನ್ಯರಲ್ಲಿ ಅಸಾಮಾನ್ಯರು ಒಂದೇ ಆಟೋದಲ್ಲಿ ಬರೋಬ್ಬರಿ 1,2,5,9,14,20….. ಊಹೂಂ..ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನೀವು ದಿಗ್ಭ್ರಮೆ ಆಗೋದು ಪಕ್ಕಾ...

ಒಂದೇ ಆಟೋದಲ್ಲಿ ಬರೋಬ್ಬರಿ 1,2,5,9,14,20….. ಊಹೂಂ..ಒಟ್ಟು ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನೀವು ದಿಗ್ಭ್ರಮೆ ಆಗೋದು ಪಕ್ಕಾ !!

Hindu neighbor gifts plot of land

Hindu neighbour gifts land to Muslim journalist

ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾ ವಾಹನವನ್ನು ತಡೆದ ಉತ್ತರಪ್ರದೇಶದ ಪೊಲೀಸರಿಗೆ ಅಕ್ಷರಶಃ ಆಘಾತ ಕಾದಿತ್ತು. ಹೌದು, ಕೇವಲ ಮೂರು ಚಕ್ರದ ಆಟೋದಲ್ಲಿ ಬರೋಬ್ಬರಿ 27 ಮಂದಿ ಪ್ರಯಾಣಿಸುತ್ತಿದ್ದ ಸಂಗತಿ

ಉತ್ತರ ಪ್ರದೇಶದ ಫತೆಪುರದ ಬಿಂಡ್ಕಿ ಕೊತ್ವಾಲಿ ಪ್ರದೇಶದಲ್ಲಿ ಮೊದಲ ಬಾರಿಗೆ ಆಟೋ ಒಂದು ವೇಗದ ಕಾರಣದಿಂದ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಪೊಲೀಸರ ಸ್ಪೀಡ್ ಚೆಕ್ ಮಾಡುವ ಗನ್ನುನಲ್ಲಿ ಮುನ್ನುಗ್ಗಿ ಬರುತ್ತಿರುವ ಆಟೋ ಅತ್ಯಂತ ವೇಗವಾಗಿ ಚಲಿಸುತ್ತಿರುವುದು ಪತ್ತೆಯಾಗಿತ್ತು. ಕೂಡಲೇ ಆ ಆಟೋವನ್ನು ಹಿಂಬಾಲಿಸಿದ ಪೊಲೀಸರು ಅಡ್ಡ ಹಾಕಿ ತಡೆದು ನಿಲ್ಲಿಸಿದ್ದಾರೆ.

ನಂತರ ಒಬ್ಬೊಬ್ಬರನ್ನಾಗಿ ಆಟೋದಿಂದ ಇಳಿಸಿ ಲೆಕ್ಕ ಶುರು ಮಾಡುವಾಗ ಪೊಲೀಸರಿಗೆ ಒಂದು ಕ್ಷಣ ದಿಗ್ಭ್ರಮೆಯಾಗಿದೆ. ಕಾರಣ, ಒಬ್ಬೊಬ್ಬರನ್ನಾಗಿ ಇಳಿಸುತ್ತಾ ಲೆಕ್ಕ ಮಾಡುತ್ತಿದ್ದಂತೆ…1, 2, 3,66,11,15………… ! ಒಳಗಿನಿಂದ ಜನ ನಿರಂತರವಾಗಿ ಉದುರುತ್ತಲೇ ಇದ್ದರು. ಕೇವಲ ಮೂರು ಚಕ್ರದ ಮತ್ತು ಮೂರನೇ ಸೀಟು ಇದ್ದ ಈ ಆಟೋರಿಕ್ಷಾದಲ್ಲಿ ಬರೊಬ್ಬರಿ 27 ಜನರನ್ನು ತುರುಕಿದ್ದಲ್ಲದೆ, ಓವರ್ ಸ್ಪೀಡಿನಲ್ಲಿ ಬೇರೆ ಆಟೋ ಚಲಾವಣೆ ಮಾಡುತ್ತಿದ್ದ ಚಾಲಕ.

ಪ್ರಯಾಣಿಕರೆಲ್ಲರೂ ಇದ್ ಪ್ರಾರ್ಥನೆ ಮುಗಿಸಿ ವಾಪಸ್ ಮನೆ ಕಡೆ ಹೊರಟಿದ್ದರು. ಈ ಸಂಬಂಧ ಟ್ವಿಟರ್ ನಲ್ಲಿ ವೈರಲ್ ಆಗಿದೆ 27 ಜನರನ್ನು ತುಂಬಿ ಹೊರಟಿದ್ದ ಆಟೋ. ನಂತರ ಆಟೋ ವನ್ನೂ ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದಾರೆ.