Home News ಕಂಠ ಪೂರ್ತಿ ಕುಡಿಸಿ ಗಂಡನ ಕಂಠ ಗೀಚಿದ ಪತ್ನಿ

ಕಂಠ ಪೂರ್ತಿ ಕುಡಿಸಿ ಗಂಡನ ಕಂಠ ಗೀಚಿದ ಪತ್ನಿ

Hindu neighbor gifts plot of land

Hindu neighbour gifts land to Muslim journalist

ಮೂರನೇ ಪತ್ನಿಯಿಂದ ಪತಿರಾಯ ಬರ್ಬರವಾಗಿ ಕೊಲೆಯಾದ ಪ್ರಕರಣ ಕುಂದಾನಗರಿಯಲ್ಲಿ ನಡೆದಿದೆ. ಇಷ್ಟಪಟ್ಟು ಮದುವೆಯಾದವಳಿಂದಲೇ ಕೊಲೆ! ಮನೆಗೆ ಬರುತ್ತೇನೆ ಎಂದವಳು ಕೊಲೆಗಯ್ದು ಹಿಂತಿರುಗಿದಳು !

ತನಿಖೆಯ ವಿವರ, ಕೊಲೆಗಾರರ ಸಂಚು, ಘಟನೆಯ ವಿವರ ಇಲ್ಲಿದೆ ನೋಡಿ.
ಗಜಾನನ ಎಂಬಾತ ಈ ಹಿಂದೆ ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನನ್ನು ಬಿಟ್ಟು ಹೋಗಿದ್ದರು. ಬಳಿಕ ಎರಡನೇ ಪತ್ನಿಯ ಮಗನೊಂದಿಗೆ ಗಜಾನನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದರು. ಈ ವೇಳೆ ವಿಧವೆ ವಿದ್ಯಾ ಪಾಟೀಲ್​​ ಜತೆಗೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು. ಈಕೆ ತನ್ನ ಇಬ್ಬರು ಮಕ್ಕಳ ಜೊತೆ ಗಜಾನನ ಜೊತೆಗೆ ವಾಸವಿದ್ದಳು.

ಗಜಾನನ ಸಾಲ ಮಾಡಿ ಮೂರನೇ ಪತ್ನಿಗೆ ಮನೆ ಕಟ್ಟಿಸಿ ಕೊಟ್ಟಿದ್ದರಂತೆ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು. ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ಗಜಾನನ ವಿದ್ಯಾ ಪಾಟೀಲ್‌ಗೆ ಒತ್ತಾಯಿಸುತ್ತಿದ್ದರಂತೆ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಗಜಾನನ ನಾಯ್ಕ್ ಹತ್ಯೆಗೆ ವಿದ್ಯಾ ಪಾಟೀಲ್​​ ಸಂಚು ರೂಪಿಸಿದ್ದಳು ಎನ್ನಲಾಗಿದೆ.

ಫೆ.26ರ ರಾತ್ರಿ ಮನೆಗೆ ಬರುತ್ತೇನೆ ನಿನ್ನ ಮಗನನ್ನು ಊರಿಗೆ ಕಳುಹಿಸು ಎಂದು ವಿದ್ಯಾ ಗಜಾನನ ಅವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಅದರಂತೆ ಗಜಾನನ ಅವರು ಮಗನ‌ನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿದ್ದರು. ಅಂದು (ಫೆ.26) ರಾತ್ರಿ ಗಜಾನನ ನಾಯ್ಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಪತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ್ದಾಳೆ.

ಪುತ್ರ ಹೃತಿಕ್ ತನ್ನ ಸ್ನೇಹಿತ ಪರಶುರಾಮ ಗೋಂದಳಿ ಯನ್ನು ಗಜಾನನ ಮನೆಗೆ ಮಧ್ಯರಾತ್ರಿ ಕರೆಯಿಸಿದ್ದಾಳೆ. ಈ ವೇಳೆ ಹರಿತವಾದ ಆಯುಧದಿಂದ ಕತ್ತು ಸೀಳಿ ಗಜಾನನ ನಾಯ್ಕ್ ಹತ್ಯೆ ಮಾಡಿ, ಆತನ ಡೈರಿ, ಮೊಬೈಲ್ ಫೋನ್ ಜತೆ ಮೂವರು ಪರಾರಿಯಾಗಿದ್ದಾರೆ.

ಫೆ.27 ರಂದು ಗಜಾನ‌ನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಪಾಟೀಲ್ ಮೇಲೆ ಅವಧೂತ್​ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೋಲಿಸರು ಈ ಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ವಿದ್ಯಾ ಪಾಟೀಲ್​​, ಆಕೆಯ ಪುತ್ರ ಹೃತಿಕ್​​ ಹಾಗೂ ಸ್ನೇಹಿತ‌ ಪರಶುರಾಮ ಗೋಂದಳಿಯನ್ನು ಬಂಧಿಸಿದ್ದಾರೆ.