Home ಬೆಂಗಳೂರು ಪೇರೆಂಟ್‌ ಮೀಟಿಂಗ್‌ ಗೆ ಬಾಯ್‌ಫ್ರೆಂಡನ್ನು ಕರೆದುಕೊಂಡು ಬಂದ ವಿದ್ಯಾರ್ಥಿನಿ, ಗುಟ್ಟು ರಟ್ಟು | ಅಷ್ಟಕ್ಕೂ ಈ...

ಪೇರೆಂಟ್‌ ಮೀಟಿಂಗ್‌ ಗೆ ಬಾಯ್‌ಫ್ರೆಂಡನ್ನು ಕರೆದುಕೊಂಡು ಬಂದ ವಿದ್ಯಾರ್ಥಿನಿ, ಗುಟ್ಟು ರಟ್ಟು | ಅಷ್ಟಕ್ಕೂ ಈ ಗುಟ್ಟು ರಟ್ಟಾಗಿದ್ದು ಹೇಗೆ ಗೊತ್ತಾ?

Parent meeting with teacher in classroom.

Hindu neighbor gifts plot of land

Hindu neighbour gifts land to Muslim journalist

ಶಾಲಾ ಮಕ್ಕಳು ಇತ್ತೀಚೆಗೆ ಆಧುನಿಕತೆಯ ಮೋಡಿನಲ್ಲಿ ಮುಳುಗಿ ಯಾವುದು ಸರಿ ತಪ್ಪು ಎಂಬ ತಿಳುವಳಿಕೆಯನ್ನು ಮರೆತಿದ್ದಾರಾ ಎಂಬ ಅನುಮಾನವು ಕೆಲವೊಂದು ಸಂದರ್ಭದಲ್ಲಿ ಮೂಡುತ್ತದೆ. ಇತ್ತೀಚೆಗಷ್ಟೇ ಸ್ಕೂಲ್‌ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಂ, ಗರ್ಭನಿರೋಧಕ ಮಾತ್ರೆಗಳೆಲ್ಲ ಸಿಕ್ಕಿದ್ದು ನಿಜಕ್ಕೂ ಆಘಾತಕಾರಿ ವಿಷಯ ಎಂದೇ ಹೇಳಬಹುದು. ಅಂತಹುದರಲ್ಲಿ ಈಗ ಮತ್ತೊಂದು ಘಟನೆ ನಡೆದಿದ್ದು ಮಕ್ಕಳ ಈ ವರ್ತನೆಗೆ ನಿಜಕ್ಕೂ ಪೋಷಕರೇ ದಿಗಿಲುಗೊಂಡಿದ್ದಾರೆ. ಮುಗ್ಧತೆಯ ಗೂಡಾಗಿರುತ್ತಿದ್ದ ಮಕ್ಕಳು ಈಗ ಈ ಮೊಬೈಲ್‌ ಚಟ ಎಲ್ಲಾ ದುರಾಭ್ಯಾಸಗಳನ್ನು ಕಲಿಸುತ್ತಿದೆಯೇ ಎಂಬುದರ ಬಗ್ಗೆ ಅವಲೋಕನ ಮಾಡುವುದು ಅಗತ್ಯ. ಈಗ ಅಂತಹದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ವಿಷಯ ಏನೆಂದರೆ, ಇಲ್ಲೊಬ್ಬ ಬಾಲಕಿ ಶಾಲೆಯಲ್ಲಿ ಪೋಷಕರ ಮೀಟಿಂಗ್​ಗೆ (Parents Meeting) ತನ್ನ ಬಾಯ್​ ಫ್ರೆಂಡ್​ನನ್ನು (Boy Friend) ಕರೆತಂದು ಇವರೇ ನನ್ನ ಅಣ್ಣ ಎಂದಿದ್ದಾಳೆ. ಬೆಂಗಳೂರಿನ ಶಾಲೆಯಲ್ಲಿ (Bengaluru School) ಇಂತಹ ಘಟನೆ ನಡೆದಿದೆ. ನಂತರ ಶಿಕ್ಷಕರು ಸರಿಯಾಗಿ ವಿಚಾರಣೆ ಮಾಡಿದಾಗ ವಿದ್ಯಾರ್ಥಿನಿಯ ಪೇರೆಂಟ್ ಡ್ರಾಮಾ ಬಯಲಾಗಿದೆ.

ಈ ಘಟನೆಯಿಂದ ನಿಜಕ್ಕೂ ಶಿಕ್ಷಕರೇ ಬೆಚ್ಚಿಬಿದ್ದಿದ್ದಾರೆ. ಪೋಷಕರ ಮೀಟಿಂಗ್ ನಲ್ಲಿ ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಪೋಷಕರ‌ ಮೀಟಿಂಗ್​ ಬಾಯ್ ಫ್ರೆಂಡ್ ಕರೆದುಕೊಂಡು ಬಂದ ವಿದ್ಯಾರ್ಥಿನಿ ಶಿಕ್ಷಕರ ಕೈಯಲ್ಲಿ ಸಿಕ್ಕಿಬಿದ್ದಿದ್ದಾಳೆ. ವಿದ್ಯಾರ್ಥಿನಿ ಬಾಯ್ ಫ್ರೆಂಡ್ ಕರೆದುಕೊಂಡು ಬಂದು, ‘ ಇವ ನನ್ನ ಬ್ರದರ್ ‘ ಎಂದು ಶಾಲೆ ಆಡಳಿತ ಮಂಡಳಿಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಖಾಸಗಿ ಶಾಲೆಯ ಆಡಳಿತ ಮಂಡಳಿ ಹುಡುಗನನ್ನ ವಿಚಾರಿಸಿದಾಗ ‘ ಇವಳು ನನ್ನ ಸಿಸ್ಟರ್ ‘ ಎಂದು ಹೇಳಿದ್ದಾನೆ. ಪದೇ ಪದೇ ವಿಚಾರಿಸಿದಾಗ, ಬ್ರದರ್ ಇದ್ದದ್ದು ‘ ಕಸಿನ್ ಬ್ರದರ್ ‘ ಆಗಿದೆ. ಹುಡುಗಿ ತನ್ನ ಹೇಳಿಕೆಯನ್ನು ಕೊಂಚ ಬದಲಿಸಿದ್ದಾಳೆ. ನು

ಇಬ್ಬರ ಹೇಳಿಕೆಯಲ್ಲಿ ಗೊಂದಲವನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಮತ್ತಷ್ಟು ವಿಚಾರಿಸಿದಾಗ ಬ್ರದರ್ ಬಾಯ್ ಫ್ರೆಂಡ್ ಆಗಿದ್ದಾನೆ, ನಂತರ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾರೆ.