Home Karnataka State Politics Updates ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಿದ್ದ ಕಡತಗಳಿಗೆ ಮುಕ್ತಿ| 15-20 ವರ್ಷಗಳ ಕಡತಗಳಿಗೆ ಶೀಘ್ರ ಪರಿಹಾರ- ಆರ್...

ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಿದ್ದ ಕಡತಗಳಿಗೆ ಮುಕ್ತಿ| 15-20 ವರ್ಷಗಳ ಕಡತಗಳಿಗೆ ಶೀಘ್ರ ಪರಿಹಾರ- ಆರ್ ಅಶೋಕ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಸುಮಾರು 15-20 ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ನೀಡುವ ಕೆಲಸವನ್ನು ಆರ್ ಅಶೋಕ್ ಪ್ರಾರಂಭಿಸಿದ್ದಾರೆ.

ಈ ಮೂಲಕ ಜನತೆಗೆ ಅನುಕೂಲ‌ಮಾಡಿಕೊಡುವ ವಿನೂತನ ಕಾರ್ಯಕ್ರಮವನ್ನು ಗುರುವಾರ ಮೈಸೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪ್ರಾರಂಭಿಸಲಿದ್ದಾರೆ.

ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಕಡತಗಳು ಕೇವಲ ಕಾಗದ ಅಲ್ಲ, ಜನರ ಹಿತ ಭಾವನೆ ಅಡಕಗೊಂಡಿದೆ. ಹಲವಾರು ಕಾರಣಗಳಿಂದ ಇತ್ಯರ್ಥ ಆಗದೆ ಇದ್ದ ಹಳೆಯ ಕಡತಗಳನ್ನು 10 ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ತೀರ್ಮಾನ ಮಾಡಬೇಕು. ಗುರುವಾರ ಪ್ರಾಯೋಗಿಕವಾಗಿ ಮೈಸೂರಿನಲ್ಲಿ ಆರಂಭಿಸುತ್ತಿದ್ದೇನೆ. ನಂತರ ರಾಜ್ಯಾದ್ಯಂತ ಈ‌ ಅಭಿಯಾನ ಮುಂದುವರಿಯುತ್ತೆ. ಇದರಿಂದ ಜನರ ಅಲೆದಾಟ ತಪ್ಪುತ್ತೆ ಎಂದು ಹೇಳಿದರು.

ಕಡತಗಳ ಸಮಸ್ಯೆ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಅರಿವಾಗಿತ್ತು. ಈ‌ ಅಭಿಯಾನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಗಲಿದೆ. ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಎಲ್ಲಾ ಇದರ ನೇತೃತ್ವದಲ್ಲಿ ಇರುತ್ತಾರೆ. ಜನರಪರ ಸ್ನೇಹಿ ಇಲಾಖೆಯಾಗಿ‌ ಕಂದಾಯ ಇಲಾಖೆ ಹೊರಹೊಮ್ಮಬೇಕು ಇದು ನನ್ನ‌ಆಶಯ ಎಂದು ಆರ್ ಅಶೋಕ್ ಹೇಳಿದರು.