Home latest ಸಾರ್ವಜನಿಕರೇ ಎಚ್ಚರ | ನಗರಕ್ಕೆ ಕಾಲಿಟ್ಟಿದೆ “ಮಂಕಿ ಗ್ಯಾಂಗ್” !!!

ಸಾರ್ವಜನಿಕರೇ ಎಚ್ಚರ | ನಗರಕ್ಕೆ ಕಾಲಿಟ್ಟಿದೆ “ಮಂಕಿ ಗ್ಯಾಂಗ್” !!!

Hindu neighbor gifts plot of land

Hindu neighbour gifts land to Muslim journalist

ಸಿಲಿಕಾನ್ ಸಿಟಿ ಬೆಂಗಳೂರಿಗರು ಬಹಳಷ್ಟು ಜಾಗರೂಕತೆಯಿಂದ ಇರಬೇಕು. ಏಕೆಂದರೆ ಮಂಕಿ ಗ್ಯಾಂಗ್ ಒಂದು ಸದ್ದಿಲ್ಲದೇ ನಗರದಲ್ಲಿ ಬೀಡು ಬಿಟ್ಟಿದೆ. ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು, ಮನೆಯ ಕಾಂಪೌಂಡ್ ಜಿಗಿದು ಫ್ಲ್ಯಾಟ್‌ಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಈ ಖದೀಮರು ಪೋನ್ ಬಳಸಲ್ಲ ಹಣವನ್ನಂತೂ ಮುಟ್ಟೋದೆ ಇಲ್ಲ.

ಹೀಗೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಹೊಸ ಮಂಕಿ ಗ್ಯಾಂಗಿನ ಕಿಂಗ್ ಪಿನ್ ಇಸೈರಾಜ್, ನಗರಕ್ಕೆ ತಮಿಳುನಾಡು ಮೂಲದ ಮಂಕಿ ಗ್ಯಾಂಗ್ ಬಂದಿದ್ದು, ಜನರು ಎಚ್ಚೆತ್ತುಕೊಳ್ಳಬೇಕು.

ಪೈಪ್‌ಗಳ ಮೂಲಕ ಹತ್ತುವ ಕಲೆ ಕರಗತ ಮಾಡಿಕೊಂಡಿರುವ ಖದೀಮರು ಸೈಡ್ ವಿಂಡೋಗಳ ಮೂಲಕ ಮನೆಗೆ ಒಳನುಗುತ್ತಾರೆ. ಹೀಗೆ ಎಂಟ್ರಿಯಾಗೋ ಮಂಕಿ ಗ್ಯಾಂಗ್ ಖದೀಮರು ಚಿನ್ನಾಭರಣ ಬಿಟ್ಟು ಬೇರೆ ಏನು ಮುಟ್ಟೋದಿಲ್ವಂತೆ. ಹಣ ಹೋದರೆ ಮಾಲೀಕರಿಗೆ ಗೊತ್ತಾಗುತ್ತೆ ಚಿನ್ನಾಭರಣ ಕಳುವಾದರೆ ಅಷ್ಟು ಬೇಗ ಗೊತ್ತಾಗಲ್ಲ ಎಂದು ಈ ರೀತಿಯಾಗಿ ಕೃತ್ಯವೆಸಗುತ್ತಿದ್ದಾರೆ.

ಇನ್ನು ಮೊಬೈಲ್ ಪೋನ್ ಬಳಸಿದರೆ ಪೊಲೀಸರಿಗೆ ಸಿಕ್ಕಿಬೀಳುತ್ತೇವೆಂದು, ಮೊಬೈಲ್‌ಗಳನ್ನು ಈ ಗ್ಯಾಂಗ್ ಬಳಸುತ್ತಿಲ್ಲ. ಸದ್ಯ ಸಿಸಿಟಿವಿ ದೃಶ್ಯ ಆದರಿಸಿ ಗ್ಯಾಂಗಿನ ಕಿಂಗ್ ಪಿನ್ ಇಸೈರಾಜ್ ನನ್ನು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಮಂಕಿ ಗ್ಯಾಂಗ್ ಕೈಚಳಕವನ್ನ ಹೊರಹಾಕಿದ್ದಾರೆ. ಈ ಗ್ಯಾಂಗ್ ತಮಿಳುನಾಡಿನಿಂದ ಬಂದಿದ್ದಾರೆ. ಪೊಲೀಸರನ್ನು ಏಮಾರಿಸಲು ಐಶಾರಾಮಿ ಹೋಟೆಲುಗಳಲ್ಲಿ ಉಳಿದುಕೊಳ್ಳುತ್ತಿದ್ದಾಗಿ ತಿಳಿದು ಬಂದಿದೆ.

ಸದ್ಯ ಆರೋಪಿಯ ಬಂಧನದಿಂದ ಸಂಜಯನಗರ, ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಹಳ್ಳಿ ಸೇರಿದಂತೆ 21 ಕಡೆ ಅಪಾರ್ಟ್‌ಮೆಂಟ್‌ಗಳಲ್ಲಿ ಕೈಚಳಕ ತೋರಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.