Home ಬೆಂಗಳೂರು ಲೌಡ್ ಸ್ಪೀಕರ್ ಬಳಕೆ : 250 ಮಸೀದಿಗಳಿಗೆ ಪೊಲೀಸರಿಂದ ನೋಟಿಸ್!

ಲೌಡ್ ಸ್ಪೀಕರ್ ಬಳಕೆ : 250 ಮಸೀದಿಗಳಿಗೆ ಪೊಲೀಸರಿಂದ ನೋಟಿಸ್!

Hindu neighbor gifts plot of land

Hindu neighbour gifts land to Muslim journalist

ಕೋರ್ಟ್ ತಿಳಿಸಲಾಗಿದ್ದ ಡೆಸಿಬಲ್ ಮಟ್ಟದಲ್ಲಿ ಲೌಡ್
ಸ್ಪೀಕರ್ ಬಳಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲೇ 250 ಮಸೀದಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆನ್ನಲಾಗಿದೆ. ಧಾರ್ಮಿಕ ಸ್ಥಳಗಳೂ ಸೇರಿದಂತೆ ಸಾರ್ವಜನಿಕವಾಗಿ ನಿಯಮ ಮೀರಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದರೆ ಕ್ರಮಕೈಗೊಳ್ಳುವಂತೆ ಡಿಜಿಪಿ ಕಳೆದ ವಾರವೇ ಅಧಿಕಾರಿಗಳಿಗೆ ತಿಳಿಸಿದ್ದರು.

ಕೈಗಾರಿಕಾ ಪ್ರದೇಶದಲ್ಲಿ ಶಬ್ದದ ಮಟ್ಟ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್ ಇರಬೇಕು. ವಾಣಿಜ್ಯ ಪ್ರದೇಶಗಳಲ್ಲಿ 65 ಹಾಗೂ ರಾತ್ರಿ 55 ಡೆಸಿಬಲ್ ಇದ್ದರೆ, ವಸತಿ ಪ್ರದೇಶಗಳಲ್ಲಿ ಹಗಲಿನಲ್ಲಿ 55 ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮಟ್ಟದಲ್ಲಿ ಶಬ್ದ ಇರಬೇಕು. ಸೈಲೆನ್ಸ್ ಝೂನ್‌ನಲ್ಲಿ ಈ ಪ್ರಮಾಣ 50 ಹಾಗೂ 40 ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

2005ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ, ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಶಬ್ದಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ನೀಡಿತ್ತು.

ಇನ್ನು, ಹಬ್ಬದ ಸಂದರ್ಭಗಳಲ್ಲಿವರ್ಷಕ್ಕೆ 15 ದಿನ ಮಾತ್ರ ಧ್ವನಿ ವರ್ಧಕಗಳನ್ನು ಮಧ್ಯ ರಾತ್ರಿಯವರೆಗೆ ಬಳಕೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕೆಲವು ಧಾರ್ಮಿಕ ಸಂದರ್ಭಗಳು, ಹಬ್ಬದ ವೇಳೆ ಮಧ್ಯ ರಾತ್ರಿಯವರೆಗೂ ಲೌಡ್‌ಸ್ಪೀಕರ್ ಬಳಸುವ ಸಲುವಾಗಿ ರಾಜ್ಯ ಸರಕಾರಗಳು ಶಬ್ದ ಮಾಲಿನ್ಯ ನಿಯಮಗಳನ್ನು ಸಡಿಲಗೊಳಿಸಬಹುದು ಎಂದು ತಿಳಿಸಿದೆ