Home ಬೆಂಗಳೂರು ಜನರೇ ಗಮನಿಸಿ… ! ಬೆಂಗಳೂರಿನಲ್ಲಿ ಹೆಚ್ಚಾಗಿದೆ ಮನೆ ಬಾಡಿಗೆ..; ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

ಜನರೇ ಗಮನಿಸಿ… ! ಬೆಂಗಳೂರಿನಲ್ಲಿ ಹೆಚ್ಚಾಗಿದೆ ಮನೆ ಬಾಡಿಗೆ..; ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

House Rent

Hindu neighbor gifts plot of land

Hindu neighbour gifts land to Muslim journalist

House rent :ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ನಗದ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಿದ್ದರು. ಹೀಗಾಗಿ ಎಲ್ಲರೂ ತಮ್ಮ ಊರುಗಳಿಗೆ ತೆರಳಿದ್ದರು. ಇದರಿಂದಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಖಾಲಿ ಇದ್ದವು. ಆದರೆ ಇದೀಗ ಕಂಪನಿಗಳು ಕಚೇರಿಗೆ ಬರುವಂತೆ ಆದೇಶಿಸಿದ್ದು ಐಟಿ‌ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಪಡೆಯಲು ಹರಸಹಾಸ ಪಡೆದುತ್ತಿದ್ದಾರೆ. ಜೊತೆಗೆ ಮನೆ ಬಾಡಿಗೆ (House rent) ಕೂಡ ಹೆಚ್ಚಾಗಿದೆ.

ನಗರದಲ್ಲಿನ ಟೆಕ್ ಕಾರಿಡಾರ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ವಸತಿಗಳ ಬಾಡಿಗೆ ಹೆಚ್ಚಾಗಿದೆ. ಹೀಗಾಗಿ ತಮ್ಮ ಊರುಗಳಿಂದ ನಗರಕ್ಕೆ ಹಿಂದಿರುಗುತ್ತಿರುವ ಟೆಕ್ಕಿಗಳಿಗೆ ಬಾಡಿಗೆ ಮನೆ ಮಾಡುವುದು ಕಷ್ಟವಾಗುತ್ತಿದೆ. ಐಟಿ ಪಾರ್ಕ್ ಸುತ್ತಮುತ್ತ ಶೇ. 20 ರಿಂದ 30 ರಷ್ಟು ಮನೆ ಬಾಡಿಗೆ ಹೆಚ್ಚಳವಾಗಿದೆ. ಹೀಗಾಗಿ ಬಾಡಿಗೆ ಮನೆ ಬದಲು ಹೊಸ ಅಪಾರ್ಟ್‌ಮೆಂಟ್‌ ಖರೀದಿ ಬೆಸ್ಟ್ ಎಂದು ಕೆಲ ಟೆಕ್ಕಿಗಳು ಅಭಿಪ್ರಾಯಪಟ್ಟಿದ್ದಾರೆ.
ಏರಿಕೆಯಾದ ಮನೆ ಬಾಡಿಗೆಯ ವಿವರ ಹೀಗಿದೆ
1 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹6000- ₹25000 ರೂ ಇತ್ತು. 2023ರಲ್ಲಿ ₹7500- ₹31,000 ರೂ ಇದೆ. 2 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹7000- ₹50,000 ರೂ ಇತ್ತು. 2023ರಲ್ಲಿ ₹8,000- ₹58,000 ರೂ ಇದೆ. 3 ಬಿಎಚ್‌ಕೆ (ಸರಾಸರಿ) 2020ರಲ್ಲಿ ₹10,000- ₹85,000 ರೂ ಇತ್ತು. 2023ರಲ್ಲಿ ₹ 12,000 – ₹1 ಲಕ್ಷ ಇದೆ.

ಇದನ್ನೂ ಓದಿ : ಜೆಡಿಎಸ್‌ ಭದ್ರಕೋಟೆಯಲ್ಲಿ ಪ್ರಧಾನಿ ಮೋದಿ ಶಕ್ತಿ ಪ್ರರ್ದಶನ