Home latest HIV ಸ್ನೇಹಿತೆಯ ಗುಟ್ಟನ್ನು ಬಹಿರಂಗ ಪಡಿಸುವುದಾಗಿ ಹಣ ಪೀಕಿಸಿದ ಖದೀಮ ಸ್ನೇಹಿತ !!! ಪೊಲೀಸ್ ಠಾಣೆಯಲ್ಲಿ...

HIV ಸ್ನೇಹಿತೆಯ ಗುಟ್ಟನ್ನು ಬಹಿರಂಗ ಪಡಿಸುವುದಾಗಿ ಹಣ ಪೀಕಿಸಿದ ಖದೀಮ ಸ್ನೇಹಿತ !!! ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

Hindu neighbor gifts plot of land

Hindu neighbour gifts land to Muslim journalist

ಅವರಿಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಕೆಲಸದ ಸ್ಥಳದಲ್ಲಿ ಪರಿಚಯ ಆದವರು. ಈ ರೀತಿ ಪರಿಚಯ ಆಗಿ ಒಂದು ದಿನ ಗೆಳತಿ ಗೆಳೆಯನಲ್ಲಿ ತನ್ನ ಸೀಕ್ರೇಟ್ ವೊಂದನ್ನು ಹೇಳುತ್ತಾಳೆ. ಅನಂತರ ಆಕೆಗೆ ಗೊತ್ತಾಯಿತು ತನ್ನ ಸ್ನೇಹಿತ ಎಂತ ನೀಚ ಎಂದು.

ಸಂತ್ರಸ್ತೆ ತನಗೆ ಎಚ್‌ಐವಿ ಇರುವ ವಿಚಾರವನ್ನು ಸ್ನೇಹಿತನಲ್ಲಿ ಹೇಳಿದ್ದಾಳೆ. ಇದು ಗೊತ್ತಾದ ಕೂಡಲೇ ಆರೋಪಿ ಅರುಣ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿ ಮಹಿಳೆಯಿಂದ 2.8 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನೂ ಸುಲಿಗೆ ಮಾಡಿದ್ದಾನೆ.

42 ವರ್ಷದ ಸಂತ್ರಸ್ತೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಕೆ.ಅರುಣ್ ಕುಮಾರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಸಾಮಾಜಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುವಾಗ ಆರೋಪಿ ಸಂತ್ರಸ್ತೆ ಮಹಿಳೆಗೆ ಪರಿಚಯವಾಗಿದ್ದು, ನಂತರ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಆರೋಪಿ ಅರುಣ್ ಗಾಗಿ ಹುಡುಕಾಟ ಮುಂದುವರಿದಿದೆ.