Home ಬೆಂಗಳೂರು ಮನೆಯಲ್ಲಿ ಮಹಿಳೆಯನ್ನು ಬೆತ್ತಲೆ ಪೂಜೆ ಮಾಡಿದರೆ ಗುಪ್ತ ನಿಧಿ !| ಬೆತ್ತಲೆ ಪೂಜೆ ಮಾಡಲು ಹೋಗಿ...

ಮನೆಯಲ್ಲಿ ಮಹಿಳೆಯನ್ನು ಬೆತ್ತಲೆ ಪೂಜೆ ಮಾಡಿದರೆ ಗುಪ್ತ ನಿಧಿ !| ಬೆತ್ತಲೆ ಪೂಜೆ ಮಾಡಲು ಹೋಗಿ ಪೂಜೆ ಮಾಡಿಸಿಕೊಂಡವರ ಸ್ಟೋರಿ !

Hindu neighbor gifts plot of land

Hindu neighbour gifts land to Muslim journalist

ರಾಮನಗರ: ಮನೆಯಲ್ಲಿ ಬೆತ್ತಲೆ ಪೂಜೆ ಮಾಡಿದರೆ ನಿಧಿ ಸಿಗುತ್ತದೆ ಎಂದು ಹೇಳಿ ವಂಚಿಸಿ ಮಹಿಳೆಯೊಬ್ಬಳನ್ನು ಬೆತ್ತಲೆಯಾಗಿಸಿ ಪೂಜೆ ಮಾಡುತ್ತಿದ್ದ ತಮಿಳುನಾಡಿನ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಭೂಹಳ್ಳಿ ಗ್ರಾಮದಲ್ಲಿ ಬೆತ್ತಲೆ ಪೂಜೆಯ ಅಸಹ್ಯ ನಡೆದಿದೆ.
ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವರನ್ನು ನಂಬಿಸಲಾಗಿತ್ತು. ಹಾಗೆ ನಿಧಿ ನಿಮ್ಮ ಪಾಲಾಗಬೇಕಾದರೆ ಬೆತ್ತಲೆ ಪೂಜೆ ಅನಿವಾರ್ಯ ಎಂದಿದ್ದರು ಆರೋಪಿಗಳು.

ಮೊನ್ನೆ ಮಂಗಳವಾರ ತಡರಾತ್ರಿ ಶ್ರೀನಿವಾಸ್‌ರವರ ನೂರು ವರ್ಷಗಳಷ್ಟು ಹಳೆಯ ಮನೆಯಲ್ಲಿ ಪೂಜೆಗೆ ಸಕಲ ಸಿದ್ಧತೆ ನಡೆದಿತ್ತು.
ಮಾಂತ್ರಿಕನ ಸಲಹೆಯಂತೆ ಮಂಗಳವಾರ ರಾತ್ರಿ ಶ್ರೀನಿವಾಸ್ ಮನೆಯಲ್ಲಿ ಬೆಂಗಳೂರಿನ ಕೆಂಗೇರಿ ಮೂಲದ ಕರೆತಂದು ಬಟ್ಟೆ ಬಿಚ್ಚಿಸಿ ಬೆತ್ತಲುಗೊಳಿಸಲಾಗಿತ್ತು. ಕೂಲಿ ಕೆಲಸ ಮಾಡುವ ಮಹಿಳೆಯನ್ನು 50 ಸಾವಿರ ನೀಡುವ ಆಸೆ ತೋರಿಸಿ ಬೆತ್ತಲೆ ಕೂರಿಸಲಾಗಿತ್ತು.
ಬೆತ್ತಲೆ ಪೂಜೆ ನಡೆಯುತ್ತಿರುವ ಮಧ್ಯೆಯೇ ಪೋಲೀಸರು ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿದ್ದ ಎಲ್ಲರಿಗೂ ಒಂದು ರೌಂಡ್ ಪೂಜೆ ಪೊಲೀಸರಿಂದ ತಕ್ಷಣ ಆಗಿದೆ.

ಆತಂಕಕಾರಿ ಮತ್ತು ನೋವಿನ ಸಂಗತಿ ಏನೆಂದರೆ, ಆ ಮಹಿಳೆ ತನ್ನ ಆರು ವರ್ಷದ ಮಗುವನ್ನೂ ಜತೆಗೆ ಕರೆದುಕೊಂಡು ಬಂದಿದ್ದಳು ಎಂಬುದು !! ಕೂಲಿ ಕೆಲಸದ ಹೆಂಗಸಿನ ಬಡತನ ಮತ್ತು ದುಡ್ಡಿನ ಮೇಲಿನ ಆಸೆ ಆಕೆಯನ್ನು ಎಲ್ಲರ ಎದುರು ಬೆತ್ತಲೆ ಮಾಡಿದ್ದು !

ಹಾಗೆ ಬೆತ್ತಲೆ ವಾಮಾಚಾರದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಸಾತನೂತು ಪೊಲೀಸರು, ತಮಿಳುನಾಡು ಮೂಲದ ಪ್ರಮುಖ ಆರೋಪಿ ಪಾರ್ಥಸಾರಥಿ, ಮೇಸ್ತ್ರಿ ನಾಗರಾಜು, ಗುರೂಜಿ ಶಶಿಕುಮಾರ್, ಆತನ ಶಿಷ್ಯ ಮೋಹನ್ ಲಕ್ಷ್ಮಿನರಸಪ್ಪ ಹಾಗೂ ಲೋಕೇಶ್ ಎಂಬುವರನ್ನು ಬಂಧಿಸಿದ್ದಾರೆ.