Home ಬೆಂಗಳೂರು ಬೆಂಗಳೂರು:ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ವಾಸವಿದ್ದ ಮಹಿಳೆಯ ಬರ್ಬರ ಹತ್ಯೆ!! ಪ್ರಿಯಕರನಿಂದಲೇ ಕತ್ತುಹಿಸುಕಿ ಕೊಲೆ, ಆರೋಪಿಯ ಬಂಧನ

ಬೆಂಗಳೂರು:ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ವಾಸವಿದ್ದ ಮಹಿಳೆಯ ಬರ್ಬರ ಹತ್ಯೆ!! ಪ್ರಿಯಕರನಿಂದಲೇ ಕತ್ತುಹಿಸುಕಿ ಕೊಲೆ, ಆರೋಪಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ಕಟ್ಟಿಕೊಂಡ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಸುಖಸಂಸಾರ ಕಾಣಲು ತುದಿಗಾಲಲ್ಲಿ ನಿಂತಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ.

ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟೆಗಾರಪಾಳ್ಯ ಎಂಬಲ್ಲಿ ಘಟನೆ ನಡೆದಿದ್ದು ಮೃತ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಗಾಯತ್ರಿಗೆ ಈ ಮೊದಲು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೆ ಗಂಡನಿಂದ ದೂರವಾಗಿ ಪ್ರಿಯಕರ ಮಂಜುನಾಥ್ ಜೊತೆಗೆ ಬೇರೆ ಮನೆಯಲ್ಲಿ ವಾಸವಿದ್ದ ಗಾಯತ್ರಿ ಹಾಗೂ ಮಂಜುನಾಥ ನಡುವೆ ವಿನಃ ಕಾರಣ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಮಂಜುನಾಥ್ ಗಾಯತ್ರಿಯನ್ನು ಕತ್ತುಹಿಸುಕಿ ಕೊಲೆಗೈದಿದ್ದಾನೆ. ಸದ್ಯ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.