Home News Bengaluru Murder Case: ಲವ್ವರ್ ಜೊತೆ ಪತ್ನಿಯ ರಾಸಲೀಲೆ; ಪತಿಯ ಮುಂದೆ ಪ್ರೇಮಕಾಂಡ ಬಯಲು!! ಮುಂದೆ...

Bengaluru Murder Case: ಲವ್ವರ್ ಜೊತೆ ಪತ್ನಿಯ ರಾಸಲೀಲೆ; ಪತಿಯ ಮುಂದೆ ಪ್ರೇಮಕಾಂಡ ಬಯಲು!! ಮುಂದೆ ನಡೆದಿದ್ದೇ ಅನಾಹುತ!?

Bengaluru Murder Cas

Hindu neighbor gifts plot of land

Hindu neighbour gifts land to Muslim journalist

Bengaluru Murder Case: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime news)ವರದಿಯಾಗುತ್ತಲೇ ಇರುತ್ತವೆ. ಇದೀಗ, ಪತ್ನಿಯೊಬ್ಬಳು ತನ್ನ ಪ್ರೇಮ ಪ್ರಕರಣಕ್ಕೆ ಅಡ್ಡಿಯಾದ ಪತಿಯನ್ನು ಹತ್ಯೆ (Murder )ಮಾಡಿ ಸಹಜ ಸಾವು ಎಂದು ಬಿಂಬಿಸಲು ಮುಂದಾಗಿ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.

ಬೆಂಗಳೂರಿನಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ನಿತೀಶ್ ಕುಮಾರ್ ಪತಿ ವೆಂಕಟರಮಣ ಅವರ ಕೊಲೆ (Bengaluru Murder Case)ಮಾಡಿದ ಘಟನೆ ವರದಿಯಾಗಿದೆ. ಜನವರಿ‌ 6 ರಂದು ಪತಿ ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಪ್ರಿಯಕರ ನಿತೇಶ್‌ನನ್ನು ಪತ್ನಿ ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಈ ಸಂದರ್ಭ ಗಂಡ ವೆಂಕಟರಮಣ ಏಕಏಕಿ ಮನೆಗೆ ಬಂದಿದ್ದು, ಈ ಸಂದರ್ಭ ಪತ್ನಿಯ ರಾಸಲೀಲೆ ಕಂಡು ಪತಿ ಶಾಕ್ ಆಗಿದ್ದಾನೆ.

ಈ ಸಂದರ್ಭ ಪತ್ನಿ ಹಾಗೂ ಆಕೆಯ ಪ್ರಿಯಕರ ನಿತೀಶ್ ಕುಮಾರ್ ಸೇರಿ ವೆಂಕಟರಮಣ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಮನೆಯ ಹೊರಗೆ ಶೌಚಾಲಯದ ಬಳಿ ಇಟ್ಟು ಅಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದಾರೆ. ಚೂಪಾದ ಕಲ್ಲು ಇಟ್ಟು ಕಲ್ಲಿನ ಮೇಲೆ ಬಿದ್ದಿದ್ದಾನೆ ಎಂದು ಸೀನ್ ಕ್ರೀಯೆಟ್ ಮಾಡಿದ್ದಾರೆ.

ಇದಾದ ಬಳಿಕ ಬೆಳಗ್ಗೆ ಗಂಡ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪತ್ನಿಯೇ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದು ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ಆದರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ (Post mortem report)ಮಾಡಿದಾಗ ಕೊಲೆ ಎಂಬುದು ಪತ್ತೆಯಾಗಿದೆ. ಹೀಗಾಗಿ, ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪತ್ನಿ ಪ್ರಿಯಕರನ ಜೊತೆಗೆ ಸೇರಿಕೊಂಡು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಸದ್ಯ , ಆರೋಪಿಗಳನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fertility Increasing Fruit: ಪುರುಷ – ಮಹಿಳೆಯರ ಫಲವತ್ತತೆ ಹೆಚ್ಚಿಸುವಲ್ಲಿ ಈ ಹಣ್ಣು ಉಪಕಾರಿ!!