Home ದಕ್ಷಿಣ ಕನ್ನಡ Ramanatha Rai: ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ...

Ramanatha Rai: ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ’ಯ ಮಹತ್ವದ ಸಭೆ

Ramanatha Rai

Hindu neighbor gifts plot of land

Hindu neighbour gifts land to Muslim journalist

Ramanatha Rai : ರಮಾನಾಥ ರೈ (Ramanatha Rai) ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಮಂಗಳೂರು’ ಇದರ ಮಹತ್ವದ ಸಭೆ ನಡೆದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಜೀವನವನ್ನು ಅಸಹನೀಯಗೊಳಿಸಿರುವ ಕೋಮುವಾದಿ ಅಜೆಂಡಾ, ಮತೀಯ ಹಿಂಸೆಗಳ ವಿರುದ್ದ ಸಂಘಟಿತವಾಗಿ ಕೆಲಸ ಮಾಡುವ ಉದ್ದೇಶ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋಮುವಾದ, ಮತೀಯ ಹಿಂಸಾಚಾರ ತಡೆಗೆ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಲು ಸಿಎಂ ಬಳಿ ನಿಯೋಗ ಕೊಂಡೊಯ್ಯಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಹಾಗೂ ರಾಷ್ಟ್ರದಲ್ಲಿ ನಡೆದಿರುವ ಅಪರಾಧ ಪ್ರಕರಣಗಳು ಬಹುತೇಕ ರಾಜಕೀಯ ಬೆಂಬಲದಿಂದ ನಡೆದಿದ್ದು, ಅದರಲ್ಲಿಯೂ ಕೊಲೆಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆಯದೆ ಕೊಲೆಯ ಹಿಂದೆ ಅಡಗಿರುವ ಶಕ್ತಿಗಳು ಕಾನೂನಿನ ಚೌಕಟ್ಟಿನಿಂದ ಪಾರಗುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕಾರ್ಯ ನಡೆಯಬೇಕು.ಹೀಗಾಗಿ, ಕಳೆದ ಎರಡು ದಶಕಗಳ ಅವಯಲ್ಲಿ ಜಿಲ್ಲೆಯಲ್ಲಿ ಮತೀಯ ದ್ವೇಷದಿಂದ ನಡೆದಿರುವ ಎಲ್ಲ ಕೊಲೆಗಳನ್ನು ಮರು ತನಿಖೆಗೆ ಒಳಪಡಿಸಬೇಕಾಗಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಆ್ಯಂಟಿ ಕಮ್ಯೂನಲ್‌ ವಿಂಗ್‌ಗೆ ದಕ್ಷ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸುವುದು, ಕೋಮುವಾದಿ ಚಟುವಟಿಕೆಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಿವಿಲ್‌ ವಾಚ್‌ ಸಮಿತಿ ರಚಿಸುವ ದ್ವೇಷ ಭಾಷಣ, ಮತೀಯ ಸಂಘಟನೆಗಳನ್ನು ಹದ್ದು ಬಸ್ತಿನಲ್ಲಿಡಲು ದೃಢ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳುವಂತಾಗಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಅನೇಕ ಬೇಡಿಕೆ, ಪ್ರಸ್ಥಾವನೆ, ಸಲಹೆಗಳನ್ನೊಳಗೊಂಡಂತೆ ಮನವಿಯ ಅನುಸಾರ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ವಿಶೇಷ ಸಭೆ ನಡೆಸಿ, ಜಿಲ್ಲಾಮಟ್ಟದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಲು ಸಭೆ ತೀರ್ಮಾನ ಕೈಗೊಂಡಿದೆ.

ಇದನ್ನೂ ಓದಿ: ರಾಜಕೀಯ ದ್ವೇಷ : ಯುವಕನ ಮೇಲೆ ಹಲ್ಲೆ ಆರೋಪ ,ಆಸ್ಪತ್ರೆಗೆ ದಾಖಲು