Home ದಕ್ಷಿಣ ಕನ್ನಡ Udupi Nejaru: ಉಡುಪಿ ನಾಲ್ವರ ಹತ್ಯೆ ಪ್ರಕರಣ; ಮೃತ ಸಹೋದರ ಅಂತ್ಯಕ್ರಿಯೆ ವಿಧಿಗಳಲ್ಲಿ ಭಾಗಿಯಾಗಲು ಪೆರೋಲ್‌ಗೆ...

Udupi Nejaru: ಉಡುಪಿ ನಾಲ್ವರ ಹತ್ಯೆ ಪ್ರಕರಣ; ಮೃತ ಸಹೋದರ ಅಂತ್ಯಕ್ರಿಯೆ ವಿಧಿಗಳಲ್ಲಿ ಭಾಗಿಯಾಗಲು ಪೆರೋಲ್‌ಗೆ ಅರ್ಜಿ ಹಾಕಿದ ಆರೋಪಿ, ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Udupi Nejaru Case

Hindu neighbor gifts plot of land

Hindu neighbour gifts land to Muslim journalist

Udupi: ಉಡುಪಿಯ ನೇಜಾರು ಗ್ರಾಮದಲ್ಲಿ ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರನ್ನು ನಿರ್ದಯವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಪ್ರವೀಣ್‌ ಚೌಗುಲೆ ಸಲ್ಲಿಸಿದ್ದ ಪೆರೋಲ್‌ ಅರ್ಜಿಯನ್ನು ನ್ಯಾಯಾಲಯವು ತಿರಸ್ಕಾರ ಮಾಡಿದೆ.

ಫೆ.1 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಧನರಾದ ತಮ್ಮ ಮೃತ ಸಹೋದರ ನಿತಿನ್‌ ಅವರ ಅಂತ್ಯಕ್ರಿಯೆ ವಿಧಿಗಳಲ್ಲಿ ಪಾಲ್ಗೊಳ್ಳಲು ತಾತ್ಕಾಲಿಕ ಬಿಡುಗಡೆಗಾಗಿ ಫೆ.8 ರಂದು ಮೂರು ಗಂಟೆಗಳ ಅವಧಿಗೆ ಚೌಗುಲೆ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದನು.

ಆರೋಪಿಯನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯ ಪೆರೋಲ್‌ ನೀಡಲು ಆಕ್ಷೇಪಣೆ ಮಾಡಿದೆ. ಹೆಚ್ಚುವರಿಯಾಗಿ ಆರೋಪಿ ತನ್ನ ಸಹೋದರನ ಮರಣಪತ್ರವನ್ನು ಒದಗಿಸಲು ವಿಫರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.