Home ದಕ್ಷಿಣ ಕನ್ನಡ Janardana Poojary : ಮಸೀದಿ, ಚರ್ಚ್ ಗಳಲ್ಲೂ ಹೆಣ ಹೂತಿಡುತ್ತಾರೆ – ಧರ್ಮಸ್ಥಳ ಹೆಸರು ಹಾಳಾಗಲು...

Janardana Poojary : ಮಸೀದಿ, ಚರ್ಚ್ ಗಳಲ್ಲೂ ಹೆಣ ಹೂತಿಡುತ್ತಾರೆ – ಧರ್ಮಸ್ಥಳ ಹೆಸರು ಹಾಳಾಗಲು ಬಿಡಲ್ಲ, ವೀರೇಂದ್ರ ಹೆಗ್ಗಡೆಯವರ ಜೊತೆ ನಾವಿದ್ದೇವೆ – ಜನಾರ್ದನ ಪೂಜಾರಿ ಘೋಷಣೆ

Hindu neighbor gifts plot of land

Hindu neighbour gifts land to Muslim journalist

Janardana Poojary: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಕೆಲವು ರಾಜಕೀಯ ನಾಯಕರು, ಮಠಾಧೀಶರು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿಯವರು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆಯವರೊಂದಿಗೆ ನಾವಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ತೊಕ್ಕೊಟ್ಟು ಮುದ್ದುಕೃಷ್ಣ ಸಮಾರಂಭದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿಯವರು, ಮಸೀದಿ, ಚರ್ಚ್‌ಗಳಲ್ಲಿ ಶವ ಹೂತಿಡಲಿಲ್ವಾ? ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ ಎಂದು ಮಾಜಿ ಸಂಸದ ಜನಾರ್ದನ ಪೂಜಾರಿ (Janardhana Poojary) ಪ್ರಶ್ನಿಸಿದರು. ಅಲ್ಲದೆ ಧರ್ಮಸ್ಥಳ ಹೆಸರು ಹಾಳು ಮಾಡಲಾಗುತ್ತಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

 ಮುಂದುವರೆದು ಮಾತನಾಡಿದವರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜೊತೆ ನಾವಿದ್ದೇವೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಜೊತೆ ಇಡೀ ಜಗತ್ತು ನಿಲ್ಲುತ್ತದೆ. ಇಡಿ ಕುದ್ರೋಳಿ ದೇವಸ್ಥಾನ ನಿಮ್ಮೊಂದಿಗಿದೆ ಹೆದರಬೇಡಿ. ಎಸ್‌ಐಟಿ ಧರ್ಮಸ್ಥಳದಲ್ಲಿ ಎಷ್ಟು ಅಗೆದರೂ ಏನು ಸಿಗೋದಿಲ್ಲ. ಮನುಷ್ಯ ಸತ್ತ ಕೂಡಲೇ ಅವನನ್ನ ದೇವಸ್ಥಾನದ ವಠಾರದಲ್ಲಿ ಹೂತು ಹಾಕೋದು ಒಂದು ಪದ್ಧತಿ. ಧರ್ಮಸ್ಥಳದಂತಹ ದೇವಸ್ಥಾನವನ್ನ ನಡೆಸೋದು ಎಷ್ಟು ಕಷ್ಟ ಇದೆ ಎಂದು ನನಗೆ ಗೊತ್ತು. ವೀರೇಂದ್ರ ಹೆಗ್ಗಡೆಯವರೇ ನಿಮ್ಮ ಜೊತೆ ನಾನಿದ್ದೇನೆ. ಧರ್ಮಸ್ಥಳದ ವಠಾರವನ್ನ ಎಸ್‌ಐಟಿಯವರು ಅಗೆಯುತ್ತಿದ್ದಾರೆ. ಶವಗಳನ್ನ ಹೂತ್ತಿದ್ದಾರೆ ಎನ್ನುವ ಆರೋಪದಲ್ಲಿ ಶವಗಳನ್ನ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.

ಅಲ್ಲದೆ ಧರ್ಮಸ್ಥಳ ಕೇವಲ ಜೈನರಿಗೆ ಸೇರಿದ ಸ್ಥಳವಲ್ಲ. ಧರ್ಮಸ್ಥಳವನ್ನ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕುದ್ರೋಳಿ ದೇವಸ್ಥಾನದಲ್ಲಿ ಮಾತ್ರ ಭಕ್ತನಲ್ಲ, ನಾನು ಧರ್ಮಸ್ಥಳದ ಭಕ್ತ. ಧರ್ಮಸ್ಥಳದ ಹೆಸರು ಹಾಳು ಮಾಡೋದಕ್ಕೆ ಪೂಜಾರಿ ಬಿಡೋದಿಲ್ಲ. ಪ್ರಧಾನಿ ಮೋದಿಯವರು ಇಂದು ಕರ್ನಾಟಕಕ್ಕೆ ಬಂದಿದ್ದಾರೆ. ಮೋದಿಯವರೇ ನಿಮಗೆ ಧೈರ್ಯವಿದ್ದರೆ, ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿ ಎಂದು ಟಾಂಗ್‌ ಕೊಟ್ಟಿದ್ದಾರೆ.