Home ದಕ್ಷಿಣ ಕನ್ನಡ ಸುಳ್ಯ: ಭಾರಿ ಮಳೆಗೆ ಬರೆ ಕುಸಿತ, ಅಪಾಯದಲ್ಲಿ ಸಿಲುಕಿದ ಮನೆ

ಸುಳ್ಯ: ಭಾರಿ ಮಳೆಗೆ ಬರೆ ಕುಸಿತ, ಅಪಾಯದಲ್ಲಿ ಸಿಲುಕಿದ ಮನೆ

Hindu neighbor gifts plot of land

Hindu neighbour gifts land to Muslim journalist

ಸುಳ್ಯ : ಶನಿವಾರ ಸಂಜೆಯಿಂದ ಭಾರಿ ಮಳೆ ಮುಂದುವರೆದಿದ್ದು, ಎಡೆ ಬಿಡದೆ ಮಳೆಯಾಗುತ್ತಿದೆ. ಇದರಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿದ್ದು, ಅನೇಕ ಅಪಾಯದ ಮುನ್ಸೂಚನೆಗಳು ತಾಂಡವ ಆಡುತ್ತಿದೆ.

ಸುಳ್ಯದ ಕಲ್ಲುಗುಂಡಿಯ ತಾಜುದ್ದೀನ್ ಟಾರ್ಲಿಯವರ ಮನೆಯ ಹಿಂಭಾಗದಲ್ಲಿ ಬರೆ ಕುಸಿತ ಉಂಟಾಗಿದೆ.ಕಲ್ಲು ಮಣ್ಣು ಕುಸಿದು ಮನೆಯ ಹಿಂಭಾಗಕ್ಕೆ ಅಪ್ಪಳಿಸಿದೆ. ಮೇಲ್ಬಾಗದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಇಲ್ಲಿನ ಮನೆಗಳೆಲ್ಲ ಅಪಾಯದ ಅಂಚಿನಲ್ಲಿ ಇದ್ದು, ಪೇರಡ್ಕ ಗೂನಡ್ಕ ಭಾಗದಲ್ಲಿ ನದಿ ಉಕ್ಕಿ ಹರಿದಿದ್ದು ರಸ್ತೆಗಳು ಜಾಲವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಕೊಯನಾಡು ಭಾಗದಲ್ಲಿ ಪ್ರವಾಹ ಉಕ್ಕಿ ಹರಿದಿದ್ದು ಮನೆಗಳಿಗೆ ನೀರು ನುಗ್ಗಿದೆ. ಪಾಯಸ್ವಿನಿ ನದಿ ಉಕ್ಕಿ ಹರಿದಿದ್ದು ಹಲವೆಡೆ ಮನೆಗೆ ಮತ್ತು ಕೃಷಿ ತೋಟಕ್ಕೆ ನುಗ್ಗಿ ನಾಶಪಡಿಸಿದೆ.