Home ದಕ್ಷಿಣ ಕನ್ನಡ ಸುಳ್ಯ: ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ!! ಒಂಭತ್ತು ಮಂದಿ ವಿದ್ಯಾರ್ಥಿಗಳ ಬಂಧನ-ಆರೋಪಿಗಳ ಮೇಲೆ ಬಿತ್ತು...

ಸುಳ್ಯ: ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ!! ಒಂಭತ್ತು ಮಂದಿ ವಿದ್ಯಾರ್ಥಿಗಳ ಬಂಧನ-ಆರೋಪಿಗಳ ಮೇಲೆ ಬಿತ್ತು ಹಲವು ಸೆಕ್ಷನ್!!

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ಕಾಲೇಜು ವಿದ್ಯಾರ್ಥಿಗಳಿಬ್ಬರು ಪ್ರೀತಿಸುತ್ತಿರುವ ವಿಚಾರ ಗುಸು ಗುಸು ಸುದ್ದಿಯಾಗುತ್ತಲೇ ಅನ್ಯಕೋಮಿನ ಯುವಕನೊಂದಿಗೆ ಯುವತಿ ಸಿಕ್ಕಿ ಬಿದ್ದ ಪರಿಣಾಮ,ಉದ್ರಿಕ್ತ ಅದೇ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಬೆಳಕಿಗೆ ಬರುತ್ತಲೇ ಪೊಲೀಸ್ ಠಾಣೆಯಲ್ಲಿ 8 ಮಂದಿಯ ವಿರುದ್ಧ ದೂರು ದಾಖಲಾಗಿತ್ತು.

ಗಾಯಾಳು ಯುವಕ ಸನೀಫ್ ನೀಡಿದ ದೂರಿನ ಅನ್ವಯ ಸುಳ್ಯ ಪೊಲೀಸರು ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಯ ಬಳಿಕ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರನ್ನು ಚರಣ್, ಧನುಷ್, ನಿಶ್ಚಯ್,ದೀಕ್ಷಿತ್, ಪ್ರಜ್ವಲ್, ಅಕ್ಷಯ್, ತನುಜ್, ಮೋಕ್ಷಿತ್, ಗೌತಮ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ನಾಲ್ವರು ಹಲ್ಲೆಗೆ ಸಹಕರಿಸಿದವರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143,147,148,323,324,506,ಜೊತೆಗೆ 149 ರಡಿಯಲ್ಲಿ ಪ್ರಕರಣ ದಾಖಲಾಗಿದೆ.