Home ದಕ್ಷಿಣ ಕನ್ನಡ ಸುಳ್ಯ : ಹಳೆ ಕಟ್ಟಡದ ಗೋಡೆ ಬಿದ್ದು ವ್ಯಾಪಾರಿ ಸಾವು

ಸುಳ್ಯ : ಹಳೆ ಕಟ್ಟಡದ ಗೋಡೆ ಬಿದ್ದು ವ್ಯಾಪಾರಿ ಸಾವು

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ನ 5 : ಹಳೇ ಕಟ್ಟಡದ ಗೋಡೆ ಮಗುಚಿ ಬಿದ್ದ ವ್ಯಾಪಾರಿಯೊಬ್ಬರು ಮೃತಪಟ್ಟ ಧಾರುಣ ಘಟನೆ ಅ .5 ರಂದು ಬೆಳಿಗ್ಗೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ.

ಅಬ್ದುಲ್ ಖಾದರ್ (ಅಂದುಕಾರ್)ರವರು ಮೃತಪಟ್ಟ ವ್ಯಾಪಾರಿ. ಇವರು ಕಳೆದ ಹಲವಾರು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

ಅಬ್ದುಲ್ ಖಾದರ್ ರವರು ಹಳೆ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯಾಪಾರ ಮಾಡುತಿದ್ದು ಅದರಂತೆ ಕಳೆದ ವರ್ಷದಿಂದ ವ್ಯವಹಾರ ಸ್ಥಗಿತಗೊಳಿಸಿರುವ ಮಲ್ನಾಡು ಕ್ಯಾಶೂ ಫ್ಯಾಕ್ಟರಿಯಲ್ಲಿದ್ದ ಕಬ್ಬಿಣ ಸಾಮಾಗ್ರಿಗಳನ್ನು ಸಂಗ್ರಹಿಸಿವ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಬ್ದುಲ್ ಖಾದರ್‌ರವರು ತಮ್ಮ ಕೆಲಸದಾಳುಗಳ ಜೊತೆ ಇಂ ಶುಕ್ರವಾರ ಬೆಳಿಗ್ಗೆ ಗೋಡೆಯ ಮೇಲ್ಬಾಗದಲ್ಲಿದ್ದ ಕಬ್ಬಿಣದ ಟ್ರಸ್‌ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆಯು ಮಗುಚಿ ಅಬ್ದುಲ್ ಖಾದರ್‌ರವರ ಮೇಲೆ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.