Home ದಕ್ಷಿಣ ಕನ್ನಡ ದ.ಕ : ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ! ಕಾರಣ?

ದ.ಕ : ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ! ಕಾರಣ?

Hindu neighbor gifts plot of land

Hindu neighbour gifts land to Muslim journalist

Sucide Case: ಕಲ್ಲಡ್ಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ ಘಟನೆ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿನಿಯು ಈ ಹಿಂದೆ ಭಗವದ್ಗೀತೆಯ 700 ಶ್ಲೋಕವನ್ನು ಕಂಠಪಾಠ ಮಾಡಿ ಜಿಲ್ಲಾ ಪ್ರಶಸ್ತಿಗೆ ಭಾಜನಳಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಕಾಲೇಜ್ ಗೆಂದು ಹೊರಟವಳು ಹಿಂದಿರುಗಿ ಮನೆಗೆ ಬಂದಿದ್ದು ಈ ವೇಳೆ ಆತ್ಮಹತ್ಯೆಗೆ ( sucide case) ಶರಣಾಗಿದ್ದಾಳೆ.

ವೈಷ್ಣವಿ ಆತ್ಮಹತ್ಯೆಗೆ( Sucide Case)ಶರಣಾದ ಮೃತ ದುರ್ದೈವಿಯಾಗಿದ್ದು, ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿಗಳ ಸುಪುತ್ರಿ ಎನ್ನಲಾಗಿದೆ. ವೈಷ್ಣವಿ ಕಲ್ಲಡ್ಕ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (Second PUC)ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆಂದು ಹೊರಟ ವೈಷ್ಣವಿ ಏನನ್ನೋ ಮರೆತಿರುವ ನೆಪ ಹೇಳಿ ಮನೆಗೆ ವಾಪಸ್ ಆಗಿದ್ದು, ಆತ್ಮಹತ್ಯೆಗೆ ಶರಣಾಗಿ ಸಾವಿನ(death) ಕದ ತಟ್ಟಿದ ವಿಷಾದನೀಯ ಘಟನೆ ವರದಿಯಾಗಿದೆ. ಇನ್ನೂ ವಿದ್ಯಾರ್ಥಿನಿಯ (Student)ಸಾವಿಗೆ ನೈಜ ಕಾರಣವೇನು ಎಂಬ ಬಗ್ಗೆ ಮಾಹಿತಿ ಇನ್ನೂ ಬಯಲಾಗಿಲ್ಲ. ಏನೇ ಆದರೂ ಅರಳಬೇಕಿದ್ದ ಹೂವೊಂದು ಅರಳುವ ಮುನ್ನವೇ ಇಹಲೋಕದ ಯಾತ್ರೆ ಮುಗಿಸಿದ್ದು ವಿಪರ್ಯಾಸವೇ ಸರಿ.