Home ದಕ್ಷಿಣ ಕನ್ನಡ ಸುಬ್ರಹ್ಮಣ್ಯ:ಟೀ ಕೊಡುವಾಗ ಕೈ ಹಿಡಿದೆಳೆದ ಅನ್ಯಮತೀಯ ಕಟ್ಟಡ ಮಾಲೀಕ!! ಹೋಟೆಲ್ ಮಾಲಕಿಯಿಂದ ಠಾಣೆಗೆ ದೂರು

ಸುಬ್ರಹ್ಮಣ್ಯ:ಟೀ ಕೊಡುವಾಗ ಕೈ ಹಿಡಿದೆಳೆದ ಅನ್ಯಮತೀಯ ಕಟ್ಟಡ ಮಾಲೀಕ!! ಹೋಟೆಲ್ ಮಾಲಕಿಯಿಂದ ಠಾಣೆಗೆ ದೂರು

Hindu neighbor gifts plot of land

Hindu neighbour gifts land to Muslim journalist

ಸುಬ್ರಹ್ಮಣ್ಯ: ಕಟ್ಟಡ ಮಾಲೀಕನೊಬ್ಬ ಹೋಟೆಲ್ ಮಾಲಕಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರದಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ಮಹಿಳೆ ನೀಡಿದ ದೂರನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಕೊಲ್ಲಮೊಗ್ರದ ಟಿ.ಎಂ ಮೊಹಮ್ಮದ್ ಎಂಬವನ ವಾಣಿಜ್ಯ ಕಟ್ಟಡದಲ್ಲಿ ಮಹಿಳೆಯೊಬ್ಬರು ಹೋಟೆಲ್ ಒಂದನ್ನು ನಡೆಸುತ್ತಿದ್ದು,ನಿನ್ನೆ ಮುಂಜಾನೆ ವೇಳೆಗೆ ಆರೋಪಿತ ವ್ಯಕ್ತಿ ಮೊಹಮ್ಮದ್ ಹೋಟೆಲ್ ಗೆ ಆಗಮಿಸಿದ್ದ ಎನ್ನಲಾಗಿದೆ.ಹೀಗೆ ಬಂದಿದ್ದ ಮೊಹಮ್ಮಡ್ ಚಹಾ ಕೇಳಿದ್ದು,ಮಾಲಕಿ ಚಹಾ ನೀಡುವಾಗ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ.

ಈ ಬಗ್ಗೆ ಮಹಿಳೆ ಸುಬ್ರಹ್ಮಣ್ಯ ಠಾಣೆಯಲ್ಲಿ ಮೊಹಮ್ಮದ್ ವಿರುದ್ಧ ದೂರು ದಾಖಲಿಸಿದ್ದು,ಮಾಲಕಿಯ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.