Home ದಕ್ಷಿಣ ಕನ್ನಡ ಉಜಿರೆ : ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳ ಮೊಬೈಲ್ ಕಳ್ಳತನ ಯತ್ನ , ಕಳ್ಳನನ್ನು...

ಉಜಿರೆ : ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳ ಮೊಬೈಲ್ ಕಳ್ಳತನ ಯತ್ನ , ಕಳ್ಳನನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Hindu neighbor gifts plot of land

Hindu neighbour gifts land to Muslim journalist

ನಾಳೆ ಮಹಾಶಿವರಾತ್ರಿ. ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಮಧ್ಯೆ ಕಳ್ಳರ ಕೈಚಳಕ ಕೂಡ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಉಜಿರೆ ಜನಾರ್ಧನ ದೇವಸ್ಥಾನದ ಪಕ್ಕದಲ್ಲಿ ಪಾದಯಾತ್ರಿಗಳಿಗೆ ಶೌಚಾಲಯ ನೀಡಿದ್ದು, ಅಲ್ಲಿದ್ದ ಯಾತ್ರಿಕರ ಬಳಿ ಬಂದ ಓರ್ವ ಅಪರಿಚಿತ ವ್ಯಕ್ತಿ ಕರೆ ಮಾಡಲು ಮೊಬೈಲ್ ಕೊಡಿ ಎಂದು ಕೇಳಿದ್ದಾನೆ. ನಂತರ ಇದರಲ್ಲಿ ಕರೆ ಹೋಗಲ್ಲ ಇನ್ನೊಂದು ಮೊಬೈಲ್ ಕೊಡಿ ಎಂದು ಹೇಳಿ ಎರಡು ಮೊಬೈಲ್ ಪಡೆದು ಅಲ್ಲಿದ್ದ ಪರಾರಿಯಾಗಿದ್ದ.

ಇದನ್ನರಿತ ಯಾತ್ರಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಸೇರಿ ಕಳ್ಳನನ್ನು ಹಿಂಬಾಲಿಸಿ ಉಜಿರೆ ಬಸ್ ನಿಲ್ದಾಣದ ಬಳಿಯ ದುರ್ಗಾ ಟೆಕ್ಸ್ ಟೈಲ್ ಬದಿಯಲ್ಲಿ ಹಿಡಿದು ಹಿಗ್ಗಮುಗ್ಗ ಥಳಿಸಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಕಳ್ಳನನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು ವಿಚಾರಣೆಗೆ ಒಳಪಡಿಸಗಿದೆ.