Home ದಕ್ಷಿಣ ಕನ್ನಡ ಪುತ್ತೂರು : ಬಸ್ ನಲ್ಲಿ ಪರ್ಸ್ ಕಳವುಗೈದ ಕಳ್ಳಿ: ಸಿಸಿ ಕೆಮಾರದಲ್ಲಿ ದೃಶ್ಯ ಸೆರೆ

ಪುತ್ತೂರು : ಬಸ್ ನಲ್ಲಿ ಪರ್ಸ್ ಕಳವುಗೈದ ಕಳ್ಳಿ: ಸಿಸಿ ಕೆಮಾರದಲ್ಲಿ ದೃಶ್ಯ ಸೆರೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕಳೋರ್ವರ ಪರ್ಸ್ ಅನ್ನು ಕಳ್ಳಿಯೋರ್ವಳು ಕದ್ದಿರುವ ಘಟನೆಯೊಂದು ಮಂಗಳವಾರ ಬೆಳಗ್ಗೆ ನಡೆದಿತ್ತು.

ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರ ಪರ್ಸ್ ಕಳೆದುಕೊಂಡಿರುವ ಮಹಿಳೆ.

ಕಳವು ದೃಶ್ಯ ಬಸ್ ನ ಸಿಸಿ ಕೆಮಾರದಲ್ಲಿ ಸೆರೆಯಾಗಿದೆ.

ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮಂಗಳೂರಿನಿಂದ ಮಹೇಶ್ ಖಾಸಗಿ ಬಸ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಬೊಳುವಾರು ಸಮೀಪದ ಸೇತುವೆ ಹತ್ತಿರ ಕಳ್ಳಿ ಪರ್ಸ್ ಕದ್ದಿರುವುದು ಕಂಡು ಬಂದಿದೆ. ಐವತ್ತು ವರ್ಷದೊಳಗಿನ ಮಹಿಳೆಯು ಕಲ್ಲಡ್ಕ ಬಳಿ ಬಸ್ ಹತ್ತಿ ಸುಕನ್ಯಾ ಅವರ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಪುತ್ತೂರು ಪೇಟೆ ಸಮೀಪಿಸಿದ ಕಾರಣ ಸುಕನ್ಯಾ ಅವರು ತನ್ನ ಕೈಯಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನೊಳಗೆ ಹಾಕಿ ಇಳಿಯಲೆಂದು ಎದ್ದು ನಿಂತಿದ್ದರು. ಈ ವೇಳೆ ಕಳ್ಳಿ ಬ್ಯಾಗ್ ಗೆ ಕೈ ಹಾಕಿ ಪರ್ಸ್ ಎಗರಿಸಿದ್ದಾರೆ. ಈಕೆಯ ವರ್ತನೆ ನೋಡುವಾಗ ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಅದು ಸಿಗದೆ ಇದ್ದಾಗ ಕೈಗೆ ಸಿಕ್ಕ ಪರ್ಸ್ ಎಗರಿಸಿದ್ದಾಳೆ. ಈಕೆ ಕಳ್ಳತನದ ಗ್ಯಾಂಗ್ ನ ಸದಸ್ಯೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಬಸ್ ನಿಂದ ಇಳಿದ ವೇಳೆ ಸುಕನ್ಯಾ ಅವರು ಪರ್ಸ್ ಹುಡುಕಾಡಿದ್ದಾರೆ. ಆಗ ಅವರಿಗೆ ಪರ್ಸ್ ಕಳ್ಳತನವಾಗಿರುವ ವಿಷಯ ತಿಳಿಯಿತು. ಬಸ್ ಸಿಸಿ ಕ್ಯಾಮರ ಪರಿಶೀಲಿಸಿದಾಗ ಕಳ್ಳಿಯ ಕರಾಮತ್ತು ತಿಳಿದು ಬಂದಿದೆ. ಪರ್ಸ್ ನಲ್ಲಿ ಐದು ಸಾವಿರ ರೂ.ನಗದು, ದಾಖಲೆ ಪತ್ರಗಳಿತ್ತು. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.