

ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜತೆಯನ್ನು ಅನಾವರಣಗೊಳಿಸಿದ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ ನೋಡಲು ಇಚ್ಛಿಸುವ ಪುತ್ತೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಇದೇ ಬರುವ ದಿನಾಂಕ 20-03-2022 ಆದಿತ್ಯವಾರದಂದು ಬೆಳಗ್ಗೆ 10 ಗಂಟೆಗೆ ಚಿತ್ರ ವೀಕ್ಷಣೆ ಆಯೋಜಿಸಲಾಗಿದೆ. ಆಸಕ್ತರು ಶನಿವಾರ 19.03.2022 ಮಧ್ಯಾಹ್ನ 1 ಗಂಟೆಯೊಳಗೆ ಮಂಡಲದ ಅಧ್ಯಕ್ಷರು ಅಥವಾ ಪ್ರ. ಕಾರ್ಯದರ್ಶಿಯನ್ನು ಸಂಪರ್ಕಿಸಬೇಕು. ಸೀಮಿತವಾದ ಟಿಕೆಟ್‌ಗಳು ಇದ್ದು, ಮೊದಲು ಹೆಸರು ನೀಡಿದವರಿಗೆ ಮೊದಲ ಆದ್ಯತೆ ಇರುತ್ತದೆ.

ಈ ಬಾರಿ ಅವಕಾಶ ಸಿಗದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ನಮ್ಮ ಎಲ್ಲಾ ಕಾರ್ಯಕರ್ತರು ಬಂದು ನೋಡಿ ಈ ಚಲನಚಿತ್ರವನ್ನು ಪ್ರೋತ್ಸಾಹಿಸಬೇಕಾಗಿ ಶಾಸಕ ಸಂಜೀವ ಮಠಂದೂರು ಮನವಿ ಮಾಡಿಕೊಂಡಿದ್ದಾರೆ.













