Home ದಕ್ಷಿಣ ಕನ್ನಡ ಪುತ್ತೂರು: ವಿದ್ಯುತ್ ಕಂಬವೇರಿ ವಿದ್ಯುತ್‌ ಸರಿಪಡಿಸುತ್ತಿದ್ದ ಸಮಯ ವಿದ್ಯುತ್‌ ಸ್ಪರ್ಶ | ಹತ್ತನೇ ತರಗತಿ ವಿದ್ಯಾರ್ಥಿ...

ಪುತ್ತೂರು: ವಿದ್ಯುತ್ ಕಂಬವೇರಿ ವಿದ್ಯುತ್‌ ಸರಿಪಡಿಸುತ್ತಿದ್ದ ಸಮಯ ವಿದ್ಯುತ್‌ ಸ್ಪರ್ಶ | ಹತ್ತನೇ ತರಗತಿ ವಿದ್ಯಾರ್ಥಿ ಸಾವು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ವಿದ್ಯುತ್ ಸರಿ ಪಡಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಪಡುವನ್ನೂರು ಗ್ರಾಮದ ಪಡುಮಲೆ ಸರ್ಕಾರಿ ಶಾಲಾ ಸಮೀಪದ ನಿವಾಸಿ ಕೃಷ್ಣ ನಾಯ್ಕ್ ಮತ್ತು ಸರಸ್ವತಿ ದಂಪತಿ ಪುತ್ರ, ಪಟ್ಟೆಯ ಪ್ರತಿಭಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಂಜಿತ್ ಮೃತ ಪಟ್ಟವರು.

ರಂಜಿತ್ ಅವರ ಪರಿಚಯದ ಹುಡುಗನೋರ್ವ ತನ್ನ ಮನೆಗೆ ವಿದ್ಯುತ್ ಇಲ್ಲ ಹಾಗಾಗಿ ಅದನ್ನು ಸರಿಪಡಿಸುವಂತೆ ರಂಜಿತ್ ಅವರನ್ನು ತನ್ನ ಮನೆಯ ಸಮೀಪದ ಟಿಸಿ ಇರುವ ವಿದ್ಯುತ್ ಕಂಬದ ಬಳಿಗೆ ಕರೆದು ಕೊಂಡು ಹೋಗಿದ್ದ ಎನ್ನಲಾಗಿದೆ. ರಂಜಿತ್ ಟಿಸಿ ಇರುವ ವಿದ್ಯುತ್ ಕಂಬವೇರಿ ವಿದ್ಯುತ್ ಸರಿಪಡಿಸಲು ಯತ್ನಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ರಂಜಿತ್ ಪಡುಮಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು. ಈತನ ನಿಧನದ ಹಿನ್ನಲೆಯಲ್ಲಿ ಶಾಲೆಯಲ್ಲಿ ಭಾನುವಾರ ನಡೆಯಲಿದ್ದ ಶಾಲಾ ವಾರ್ಷಿಕೋತ್ಸವವನ್ನು ಮುಂದೂಡಲಾಗಿದೆ.

ಸಂಪ್ಯಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.