Home ದಕ್ಷಿಣ ಕನ್ನಡ ಪುತ್ತೂರು :ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ...

ಪುತ್ತೂರು :ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ಸಂವಾದ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಅವರ ಮನೆಗೆ ತೆರಳಿ ಸಂದರ್ಶಿಸಿ ವಿಶೇಷ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಿಂಚನಾಲಕ್ಷ್ಮೀ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ನಿರಂತರ ಕಲಿಕೆ, ಪುನರ್ಮನನ, ಸಮಯ ಹೊಂದಾಣಿಕೆ ಜೊತೆಗೆ ತನ್ನ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಹೆತ್ತವರ ಒತ್ತಡ ರಹಿತ ಸಹಕಾರ ಇವೆಲ್ಲಾ ತಮ್ಮ ಸಾಧನೆಗೆ ಸಹಕಾರಿಯಾಯಿತೆಂದು ತಿಳಿಸಿದರು. ಸಂವಾದವನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸ್ತುತಿ ,ಪ್ರತೀಕ್ಷಾ, ಪೂಜಿತ, ಅಕ್ಷಯ ನಡೆಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಳಿನಕುಮಾರಿ, ಉಪನ್ಯಾಸಕಿ ಸ್ನೇಹಾ ಬಿ ಹಾಗೂ ಸಿಂಚನಾಲಕ್ಷ್ಮೀಯ ಹೆತ್ತವರಾದ ಮುರಳೀಧರ ಭಟ್ ಮತ್ತು ಶೋಭಾ ಬಿ ಭಾಗಿಯಾಗಿದ್ದರು.