Home ದಕ್ಷಿಣ ಕನ್ನಡ ಪುತ್ತೂರು: ಸರಕಾರಿ ಆಸ್ಪತ್ರೆಯ ಐಸಿಯು‌ನಲ್ಲಿ ತಡರಾತ್ರಿ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕದಳದ ಜತೆಗೆ ದತ್ತಮಾಲಾಧಾರಿಗಳಿಂದ...

ಪುತ್ತೂರು: ಸರಕಾರಿ ಆಸ್ಪತ್ರೆಯ ಐಸಿಯು‌ನಲ್ಲಿ ತಡರಾತ್ರಿ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕದಳದ ಜತೆಗೆ ದತ್ತಮಾಲಾಧಾರಿಗಳಿಂದ ಅಗ್ನಿಶಮನ -ಶಾಸಕ ಅಶೋಕ್ ರೈ ಭೇಟಿ

Hindu neighbor gifts plot of land

Hindu neighbour gifts land to Muslim journalist

 

 

 

 

ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಐ ಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಡಿ.22 ರ ತಡ ರಾತ್ರಿ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವ ಪ್ರಯತ್ನಕ್ಕೆ ಪುತ್ತೂರು ವಿ.ಹಿಂ.ಪ ಕಾರ್ಯಾಲಯದಲ್ಲಿದ್ದ ದತ್ತ ಮಾಲಾಧಾರಿಗಳು ಬಂದು ಬೆಂಕಿ ಶಮನಕ್ಕೆ ಸಹಕರಿಸಿದರು.

 

ವಿಷಯ ತಿಳಿದು ರಾತ್ರಿ 1 ಗಂಟೆ ಸುಮಾರಿಗೆ ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಆಗಮಿಸಿದ್ದಾರೆ.

 

ಆಸ್ಪತ್ರೆಯ ಐ ಸಿ ಯು ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿಗಳು ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರಿಂದ ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ.

 

ಬೆಂಕಿಯ ಶಮನದ ಬಳಿಕ ದತ್ತ ಮಾಲಾಧಾರಿಗಳು ಅಸ್ಪತ್ರೆಯನ್ನು ಶುಚಿಗೊಳಿಸಿದ್ದಾರೆ. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆಶಾ ಪುತ್ತೂರಾಯ ಈ ಸಂದರ್ಭ ಉಪಸ್ಥಿತರಿದ್ದರು.