Home ದಕ್ಷಿಣ ಕನ್ನಡ ಪುಣ್ಚಪ್ಪಾಡಿ ಶಾಲೆಗೆ ವಿಶಾಕ್ ರೈ ತೋಟತ್ತಡ್ಕರವರಿಂದ ನೀರು ಶುದ್ಧೀಕರಣ ಯಂತ್ರ ಕೊಡುಗೆ

ಪುಣ್ಚಪ್ಪಾಡಿ ಶಾಲೆಗೆ ವಿಶಾಕ್ ರೈ ತೋಟತ್ತಡ್ಕರವರಿಂದ ನೀರು ಶುದ್ಧೀಕರಣ ಯಂತ್ರ ಕೊಡುಗೆ

Hindu neighbor gifts plot of land

Hindu neighbour gifts land to Muslim journalist

ಸವಣೂರು : ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಂದಿನ ಬಹುಮುಖ್ಯ ಅಗತ್ಯಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಪುಣ್ಚಪ್ಪಾಡಿ ಸ.ಹಿ.ಪ್ರಾ ಶಾಲೆಗೆ ಶಾಲೆಯ ಸ್ಥಳ ದಾನಿಗಳಾದ ವಿಶಾಕ್ ರೈ ತೋಟತ್ತಡ್ಕ ಅವರು ಸುಮಾರು 14 ಸಾವಿರ ಮೌಲ್ಯದ ನೀರು ಶುದ್ಧಿಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಗಾಯತ್ರಿ ಓಂತಿಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಜರಿನಾರು, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ರಾಧಾಕೃಷ್ಣ ದೇವಸ್ಯ, ಮುಖ್ಯಗುರು ರಶ್ಮಿತಾ ನರಿಮೊಗರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಕೆ. ಕಾರ್ಯಕ್ರಮ ನಿರ್ವಹಿಸಿ, ಫ್ಲಾವಿಯಾ ಸ್ವಾಗತಿಸಿ, ಚಂದ್ರಿಕಾ ವಂದಿಸಿದರು.