Home ದಕ್ಷಿಣ ಕನ್ನಡ ಮದುವೆಯಾಗುತ್ತೇನೆಂದು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ ! ಪೋಕ್ಸೋ ಪ್ರಕರಣ ದಾಖಲು

ಮದುವೆಯಾಗುತ್ತೇನೆಂದು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ ! ಪೋಕ್ಸೋ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ : ಅಪ್ರಾಪ್ತ ವಯಸ್ಸಿನ ತರುಣಿಗೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅಪ್ರಾಪ್ತ ಯುವತಿಗೂ ಕಳೆಂಜ ಗ್ರಾಮದ ಯುವಕನಿಗೂ ಕಳೆದ ಕೆಲವು ತಿಂಗಳುಗಳಿಂದ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಬಳಿಕ ಆಕೆಯ ದೂರವಾಣಿ ನಂಬರ್ ಪಡೆದು ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ ಪರಿಚಯ ಪ್ರೀತಿಯಾಗಿ, ಆಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಎರಡು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಇವರಿಬ್ಬರ ದೂರವಾಣಿ ಚಾಟ್ ಆಕೆಯ ಸಂಬಂಧಿಕರಿಗೆ ತಿಳಿದು, ಆತನಿಗೆ ಗದರಿಸಿದ್ದರು ಎನ್ನಲಾಗಿದೆ. ಬಳಿಕ ಆತ ಇವಳನ್ನು ಮದುವೆಯಾಗಲು ನಿರಾಕರಿಸಿದ ಎನ್ನಲಾಗಿದೆ. ಮನನೊಂದ ಯುವತಿ ಅ.20ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ದಯಾನಂದ ಎಂಬಾತನ ವಿರುದ್ದ ಇದೀಗ ಪೋಕ್ಸೋ ಪ್ರಕರಣ ದಾಖಲಾಗಿದೆ.