Home ದಕ್ಷಿಣ ಕನ್ನಡ ಬೀಚ್‌ನಲ್ಲಿ ಹೊಸ ವರ್ಷ ಆಚರಣೆಯ ಕನಸು ಕಂಡಿದ್ದವರಿಗೆ ತಣ್ಣೀರು ಎರಚಿದ ಓಮಿಕ್ರಾನ್

ಬೀಚ್‌ನಲ್ಲಿ ಹೊಸ ವರ್ಷ ಆಚರಣೆಯ ಕನಸು ಕಂಡಿದ್ದವರಿಗೆ ತಣ್ಣೀರು ಎರಚಿದ ಓಮಿಕ್ರಾನ್

Hindu neighbor gifts plot of land

Hindu neighbour gifts land to Muslim journalist

ಹೊಸವರ್ಷಾಚರಣೆಗೆ ವಿವಿಧ ಕಡೆ ಪಾರ್ಟಿ,ಗೌಜಿ ಮಾಡುವ ಸಂಭ್ರಮಕ್ಕೆ ಈ ಬಾರಿ ಓಮಿಕ್ರಾನ್ ತಣ್ಣೀರು ಎರಚಿದೆ.

ಹೊಸವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳನ್ನು ಬಂದ್ ಮಾಡಲಾಗುವುದು. ಬೀಚ್ ಗಳ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ

ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ 1 ರಂದು ಬೆಳಗ್ಗೆ 5 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳಲ್ಲಿ ಗುಂಪು ಗೂಡಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ.

ಕೊರೊನಾ ಸೋಂಕು ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ಸಮುದ್ರತೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು.

ಆದೇಶ ಉಲ್ಲಂಘಿಸಿದವರ ವಿರುದ್ಧ NDMA ದಾಖಲಿಸಲಾಗುವುದು. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.